ಬೆಂಗಳೂರು: ಗ್ರಾಮೀಣ ಭಾಗಗಳಲ್ಲಿ ಮೂಲಭೂತವಾಗಿ ಕಾಣುವ ಅತೀ ದೊಡ್ಡ ಸಮಸ್ಯೆಯೇ ‘ಮೊಬೈಲ್ ನೆಟ್ವರ್ಕ್’. ಮೊಬೈಲ್ ಇಲ್ಲದೆ ಯಾವುದೇ ಕೆಲಸಗಳು ನಡೆಯದ ಈ ಯುಗದಲ್ಲಿ ಗ್ರಾಮೀಣ ಭಾಗಗಳಲ್ಲಿ ಕರೆ ಮಾಡುವುದಕ್ಕೂ ನೆಟ್ವರ್ಕ್ ಸಿಗದೇ ಇರುವುದು ಒಂದು ವಿಪರ್ಯಾಸವೇ ಸರಿ.
ಗ್ರಾಮೀಣ ಭಾಗಗಳಲ್ಲಿ ಬಹಳ ಮುಖ್ಯವಾಗಿ ಈ ಸಮಸ್ಯೆ ತಲೆದೋರಿದೆ. ಈ ಕುರಿತು ಎಲ್ಲರೂ ಗಮನಹರಿಸಲೇಬೇಕಾದ ಅನಿವಾರ್ಯತೆ ಇದೆ. ಕೊರೋನ ಮಹಾಮಾರಿಯು ದೇಶವನ್ನು ಆವರಿಸಿದ ಸಂದರ್ಭದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ಆರಂಭವಾಗಿದ್ದವು, ಪಟ್ಟಣದ ವಿದ್ಯಾರ್ಥಿಗಳು ನೆಟ್ವರ್ಕ್ ಸಮಸ್ಯೆಗೆ ಒಳಗಾಗದೆ ಒಂದೆಡೆ ನೆಮ್ಮದಿಯಿಂದ ತರಗತಿಗಳನ್ನು ಕೇಳುತ್ತಿದ್ದರೆ, ಇನ್ನೊಂದೆಡೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನೆಟ್ವರ್ಕ್ ಸಿಗದೇ ತಮ್ಮ ಮನೆಗಳಿಂದ ಹತ್ತಾರು ಕಿಲೋಮೀಟರ್ ಗಳಷ್ಟು ದೂರ ಹೋಗಿ ಪಾಠ ಕೇಳಲು ಒದ್ದಾಡುತ್ತಿದ್ದರು. ಇದೆಲ್ಲವೂ ನಾವು ತೀರಾ ಹತ್ತಿರದಿಂದ ನೋಡಿರುವ ಸಮಸ್ಯೆ.
ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಗಳನ್ನು ಅನುಸರಿಸಿ ಹಲವಾರು ತುರ್ತು ಸಂದರ್ಭಗಳಲ್ಲಿ ಬೇಕಾಗುವ ಮೊಬೈಲ್ ನೆಟ್ವರ್ಕ್ ಅನ್ನು ಎಲ್ಲೆಡೆ ಸಿಗುವಂತೆ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಸರ್ಕಾರ, ವಿದ್ಯಾರ್ಥಿಗಳ ಭವಿಷ್ಯವನ್ನು ನೆನಪಿನಲ್ಲಿಟ್ಟುಕೊಂಡು ಈ ಸಮಸ್ಯೆ ಕುರಿತು ಗಮನಹರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.