Friday, October 4, 2024
Friday, October 4, 2024

ಆಚಾರ್ಯಾಸ್ ಏಸ್: ಆಫ್ ಲೈನ್ ತರಬೇತಿ ಆರಂಭ

ಆಚಾರ್ಯಾಸ್ ಏಸ್: ಆಫ್ ಲೈನ್ ತರಬೇತಿ ಆರಂಭ

Date:

ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿಯ ಆಚಾರ್ಯಾಸ್ ಏಸ್ ವತಿಯಿಂದ 8,9, ಹತ್ತನೇ ತರಗತಿ, ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ, ಸಿ.ಇ.ಟಿ, ನೀಟ್, ಜೆ.ಇ.ಇ ವಿದ್ಯಾರ್ಥಿಗಳಿಗೆ ಕ್ಲಾಸ್ ರೂಮ್ ತರಬೇತಿ ಮತ್ತೆ ಆರಂಭವಾಗಿದೆ.

ಈ ಬಾರಿಯ ಪಿಯುಸಿ ಹಾಗೂ ಸಿಇಟಿಯಲ್ಲಿ ಅತ್ಯುತ್ತಮ ಫಲಿತಾಂಶ ಹಾಗೂ ಅನೇಕ ರ್ಯಾಂಕ್ ಗಳನ್ನು ಗಳಿಸಿರುವ ಆಚಾರ್ಯಾಸ್ ಏಸ್ ಇನ್ನಷ್ಟು ಉಪಯುಕ್ತ ಯೋಜನೆಗಳೊಂದಿಗೆ ತರಬೇತಿ ಆಯೋಜಿಸಿದೆ.

2022ರ ವಾರ್ಷಿಕ ಪರೀಕ್ಷೆಗೆ ಪೂರ್ವಸಿದ್ಧತೆಗಾಗಿ ಈ ತರಬೇತಿಗಳು ಈವರೆಗೆ ಆನ್ಲೈನ್ ಮುಖಾಂತರ ಜರಗುತ್ತಿದ್ದು ಮುಂದಿನ ವಾರದಿಂದ ತರಬೇತಿಗಳು ಆನಲೈನ್ ಹಾಗೂ ಕ್ಲಾಸ್ ರೂಮ್ ತರಬೇತಿಗಳು ಜೊತೆಯಾಗಿ ಜರಗಲಿದೆ. 2022ರ ವಾರ್ಷಿಕ ಪರೀಕ್ಷೆಯವರೆಗೆ ತರಬೇತಿಗಳು ಸಾಗುವುದು.

ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥ್ಸ್ ಹಾಗೂ ಬಯಲಾಜಿ ವಿಷಯಗಳ ತರಬೇತಿಯನ್ನು ನಾಡಿನ ಪ್ರತಿಭಾವಂತ ಉಪನ್ಯಾಸಕರು ನೀಡುತ್ತಿದ್ದಾರೆ. ಉಪನ್ಯಾಸದ ಜೊತೆಗೆ ಎಲ್ಲಾ ಅಧ್ಯಾಯಗಳ ಕುರಿತಾಗಿ ನಿರಂತರ ಮಾದರಿ ಪರೀಕ್ಷೆಗಳನ್ನು ನಡೆಸಲಾಗುವುದು. ವಿವಿಧ ಪ್ರಕಾಶಕರ ಕೃತಿಗಳು ಸಂಸ್ಥೆಯ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಉಚಿತವಾಗಿ ಲಭಿಸಲಿದೆ. ಪ್ರತೀ ಸೋಮವಾರದಿಂದ ಶನಿವಾರದವರೆಗೆ ಸಂಜೆ 5 ರಿಂದ 6.30ರವರೆಗೆ ತರಬೇತಿ ನಡೆಯುತ್ತದೆ.

ನೀಟ್, ಜೆಇಇ ಹಾಗೂ ಸಿ.ಇ.ಟಿ 2022 ಕ್ಕೆ ತರಬೇತಿಯು ಪ್ರತಿ ಶನಿವಾರ ಭಾನುವಾರ ಜರಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಉಡುಪಿ ತೆಂಕಪೇಟೆಯ ಲಕ್ಷ್ಮೀ ವೆಂಕಟರಮಣ ದೇವಾಲಯದ ಸಮೀಪದಲ್ಲಿರುವ ರಾಧೇಶಾಂ ಕಟ್ಟಡದ ಆಚಾರ್ಯಾಸ್ ಏಸ್ ಕಚೇರಿ ಅಥವಾ ಬ್ರಹ್ಮಾವರದ ಮಧುವನ ಕಾಂಪ್ಲೆಕ್ಸ್ ನ ಏಸ್ ಕಚೇರಿಯ ಮೊಬೈಲ್ ಸಂಖ್ಯೆ 9901420714 ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಂಪ್ ರೋಪ್: ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಉಡುಪಿ, ಅ.3: ಶಾಲಾ ಶಿಕ಼ಣ ಇಲಾಖೆ ಹಾಗೂ ನ್ಯಾಷನಲ್ ಪದವಿಪೂರ್ವ ಕಾಲೇಜು...

ಅಕ್ಟೋಬರ್ ನಲ್ಲಿ ಧೂಮಕೇತುಗಳ ಮೆರವಣಿಗೆ

ಧೂಮಕೇತು ಸುಚಿನ್ಸಾನ್ ಅಟ್ಲಾಸ್ ಮತ್ತು ಸನ್ಗ್ರೇಸರ್ ಅಟ್ಲಾಸ್ ಈಗ ಸಪ್ಟಂಬರ್ ಅಕ್ಟೋಬರ್...

ಕರಾವಳಿ ಭದ್ರತಾ ತರಬೇತಿ ಸಂಪನ್ನ

ಉಡುಪಿ, ಅ.3: ಕರಾವಳಿ ಕಾವಲು ಪೊಲೀಸ್ ಘಟಕದ ಕರಾವಳಿ ಭದ್ರತಾ ತರಬೇತಿ...

ಆಳ್ವಾಸ್ ವಿದ್ಯಾರ್ಥಿಗಳಿಂದ ಮಣಿಪಾಲದ ಅಂಗರಚನಾಶಾಸ್ತ್ರ ಪ್ರಯೋಗಾಲಯ ಹಾಗೂ ಉದಯವಾಣಿಯ ಕೇಂದ್ರ ಕಚೇರಿಗೆ ಭೇಟಿ

ಮೂಡುಬಿದಿರೆ, ಅ.3: ಆಳ್ವಾಸ್ ಕಾಲೇಜಿನ ಪದವಿ ಮನೋವಿಜ್ಞಾನ ಮತ್ತು ಪತ್ರಿಕೋದ್ಯಮ ವಿಭಾಗದ...
error: Content is protected !!