Monday, November 25, 2024
Monday, November 25, 2024

ಶ್ರೀ ಕೃಷ್ಣ ಮಠದಲ್ಲಿ ಶ್ರೀನಿವಾಸ ಕಲ್ಯಾಣ ಹರಿಕಥಾ ಕಾರ್ಯಕ್ರಮ ಉದ್ಘಾಟನೆ

ಶ್ರೀ ಕೃಷ್ಣ ಮಠದಲ್ಲಿ ಶ್ರೀನಿವಾಸ ಕಲ್ಯಾಣ ಹರಿಕಥಾ ಕಾರ್ಯಕ್ರಮ ಉದ್ಘಾಟನೆ

Date:

ಉಡುಪಿ: ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಶ್ರೀ ಹಂಡೆದಾಸ ಪ್ರತಿಷ್ಠಾನ (ರಿ.) ಕಾರ್ಕಳ ಇದರ ವಾರ್ಷಿಕೋತ್ಸವದ ಅಂಗವಾಗಿ ಸೆಪ್ಟೆಂಬರ್ 20 ಸೋಮವಾರದಿಂದ ಅಕ್ಟೋಬರ್ 7 ಗುರುವಾರದವರೆಗೆ 18 ದಿನಗಳ ಪರ್ಯಂತ ನಡೆಯುವ ಶ್ರೀನಿವಾಸ ಕಲ್ಯಾಣ ಹರಿಕಥಾ ಕಾರ್ಯಕ್ರಮದ ಉದ್ಘಾಟನೆಯನ್ನು ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಇಂದು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ ಹಾಗೂ ಕೃಷ್ಣ ಇಬ್ಬರು ಭಗವಂತನ ಅವತಾರವಾಗಿರುತ್ತದೆ. ಆದುದರಿಂದ ಇಲ್ಲಿ ನಡೆಯುವ ಕಥಾಪ್ರಸಂಗವು ಭಗವಂತನ ಬಗ್ಗೆ ತಿಳಿಸುವ ಕಥೆಯಾಗಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ದೂರದರ್ಶನ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಆಕರ್ಷಿತರಾಗಿರುವುದರಿಂದ ಇಂತ ಕಾರ್ಯಕ್ರಮಗಳನ್ನು ಉಳಿಸಿ ಬೆಳೆಸುವಲ್ಲಿ ಹಂಡೆದಾಸ ಪರಂಪರೆಯ ಕೊಡುಗೆ ಅನನ್ಯವಾದುದು ಎಂದು ಭಾವಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಅನುಗ್ರಹಿಸಿದರು.

ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಹರಿಕಥೆಯಲ್ಲಿ ಹೆಚ್ಚಿನ ಕಥೆಗಳು ಹರಿಯ ಭಕ್ತರ ಕಥೆಗಳಿರುತ್ತವೆ ಇದರಿಂದ ಭಕ್ತರ ಭಕ್ತಿಯು ಭಗವಂತನಲ್ಲಿ ಪರ್ಯಾವಸಾನವಾಗುತ್ತದೆ. ಎಲ್ಲ ವರ್ಗದ ಜನರನ್ನು ಆಕರ್ಷಿಸಲು ಹಿರಿಯರು ಹರಿಕಥೆಯ ಮಾರ್ಗವನ್ನು ಹಾಕಿಕೊಟ್ಟರು. ಮಾನ್ವಿಯ ಜಗನ್ನಾಥದಾಸರು ತನ್ನ ಸ್ವಂತ ಅನುಭವಗಳನ್ನು ಸಮಾಜಕ್ಕೆ ನೀಡಿರುತ್ತಾರೆ. ಅವರ ದಾರಿಯಲ್ಲಿ ಬಂದಂತಹ ಹಂಡೆದಾಸ ಪರಂಪರೆಯು ಭಗವಂತನ ಮಹಾತ್ಮೆಯ ಹಲವಾರು ಕಥೆ, ಕೀರ್ತನೆಗಳನ್ನು ಸಮಾಜಕ್ಕೆ ನೀಡಿದ್ದು ಅದು ಮುಂದುವರಿಯಲಿ ಎಂದು ಸಂದೇಶ ನೀಡಿದರು.

ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಭಗವಂತನ ಚರಿತ್ರೆಯನ್ನು ಜನರಿಗೆ ಬೇರೆ ಬೇರೆ ರೀತಿಯಲ್ಲಿ ತಿಳಿಸುವ ವಿಧಾನಗಳಲ್ಲಿ ಹರಿಕಥೆಯು ಸುಲಭ ಮಾರ್ಗವಾಗಿದೆ. ಹರಿ ಕೀರ್ತನೆ, ಉಪಕಥೆಗಳು, ಸಮೂಹ ಕೀರ್ತನೆ ಮೊದಲಾದ ವೈವಿಧ್ಯಗಳೊಂದಿಗೆ ನಡೆಯುವ ಹರಿಕಥೆಯು ಸಜ್ಜನರಿಗೆ ತಲುಪಿಸಲು ಸಾಧ್ಯವಾಗಿದೆ. ಹಂಡೆ ಗುರುವೇದವ್ಯಾಸ ದಾಸರನ್ನು ಹತ್ತಿರದಲ್ಲಿ ಕಂಡಿದ್ದು ಆವರಿಗೆ ವಿದ್ಯೆ, ದೇವರ ಭಕ್ತಿ ಹರಿಕಥೆ ಮಾಡುವ ಪ್ರಾವೀಣ್ಯತೆ ವಿಶೇಷವಾಗಿತ್ತು. ಅವರ ಪುತ್ರಿ ಪ್ರತಿಷ್ಠಾನದ ಮುಖಾಂತರ ನಡೆಸುವ ಎಲ್ಲ ಕಾರ್ಯಕ್ರಮಗಳು ಶ್ರೇಯಸ್ಸಾಗಲಿ ಎಂದು ಅನುಗ್ರಹಿಸಿದರು.

ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹರಿಕಥೆಯು ನಮ್ಮ ದೇಶದ ಪರಂಪರೆಯನ್ನು ತಿಳಿಸುವ ಕಥೆ, ದೇಶದ ಪ್ರತಿಯೊಂದು ಜಾಗಕ್ಕೆ ಅದರದ್ದೆ ಆದ ಪ್ರಾದೇಶಿಕವಾದ ಮಹಿಮೆಗಳಿರುತ್ತವೆ. ಪ್ರತಿಷ್ಠಾನದ ಅಧ್ಯಕ್ಷರಾದ ರುಕ್ಮಿಣಿ ಹಂಡೆಯವರು ಅವರ ಹಿರಿಯರ ಮಾತಿನ ಪ್ರಕಾರ ಶಿಷ್ಯರನ್ನೆಲ್ಲ ಒಟ್ಟು ಸೇರಿಸಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪ್ರತಿಷ್ಠಾನದ ವತಿಯಿಂದ ವಾದಿರಾಜರಿಂದ ರಚಿತವಾದ ರುಕ್ಮಿಣೀಶ ವಿಜಯ ಗ್ರಂಥದ ಹರಿಕಥೆಯನ್ನು ರಚಿಸಿ ಆ ಮುಕಾಂತರ ದೇವರ ಸೇವೆಯನ್ನು ಮಾಡುವಂತಾಗಲಿ ಎಂದು ಆಶೀರ್ವಚನ ನೀಡಿದರು.

ಪ್ರತಿಷ್ಠಾನದ ಗೌರವ ಸಲಹೆಗಾರರಾದ ರಾಮಚಂದ್ರ ಉಪಾಧ್ಯಾಯರು ಹಂಡೆದಾಸ ಪರಂಪರೆ ಬೆಳೆದು ಬಂದ ರೀತಿ ಹಾಗೂ ಪ್ರತಿಷ್ಠಾನದ ಬೆಳವಣಿಗೆಗಳನ್ನು ತಿಳಿಸಿದರು. ಅಧ್ಯಕ್ಷರಾದ ರುಕ್ಮಿಣಿ ಹಂಡೆಯವರು ಸ್ವಾಗತಿಸಿ, ಉಪಾಧ್ಯಕ್ಷರಾದ ವೇದವ್ಯಾಸ ಐತಾಳ್ ಧನ್ಯವಾದ ನೀಡಿದರು. ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...
error: Content is protected !!