ಉಡುಪಿ: ಕರ್ನಾಟಕ ಲೋಕಸೇವಾ ಆಯೋಗವು ನಡೆಸುತ್ತಿರುವ 2019-20ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ ಕಿರಿಯ ಸಹಾಯಕರು/ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 18.09.2021 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಸರಕಾರಿ ಪದವಿಪೂರ್ವ ಕಾಲೇಜು ಸರ್ವೀಸ್ ಬಸ್ ಸ್ಟ್ಯಾಂಡ್ ಉಡುಪಿ ಇಲ್ಲಿ ನಡೆಯಲಿದ್ದು, ಒಟ್ಟು 264 ಅಭ್ಯರ್ಥಿಗಳು ಮತ್ತು ದಿನಾಂಕ 19.09.2021 ರಂದು ಸ್ಪರ್ಧಾತ್ಮಕ ಪರೀಕ್ಷೆಯು ಉಡುಪಿ ಜಿಲ್ಲೆಯಲ್ಲಿ ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು ಒಟ್ಟು 2490 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ಪರೀಕ್ಷಾ ಕೇಂದ್ರಗಳ ವಿವರ ಈ ಕೆಳಗಿನಂತಿವೆ ಎಂಬ ವಿಚಾರವನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ.
01 | ಮಣಿಪಾಲ ಪದವಿಪೂರ್ವಕಾಲೇಜು, ಮಣಿಪಾಲ, ಉಡುಪಿ |
02 | ಟಿ.ಎ.ಪೈ ಆಂಗ್ಲ ಮಾದ್ಯಮ ಶಾಲೆ ,ಕುಂಜಿಬೆಟ್ಟು ಉಡುಪಿ |
03 | ಯು ಕಮಲಾಬಾಯಿ ಪ್ರೌಢಶಾಲೆ ಕಡಿಯಾಳಿ |
04 | ಪೂರ್ಣಪ್ರಜ್ಞ ಪಿ ಯು ಕಾಲೇಜು ಉಡುಪಿ |
05 | ಪೂರ್ಣಪ್ರಜ್ಞ ಪದವಿ ಕಾಲೇಜು ,ಉಡುಪಿ |
06 | ಸರಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಉಡುಪಿ |
07 | ಕ್ರಿಶ್ಚಿಯನ್ ಪ್ರೌಢಶಾಲೆ ,ಉಡುಪಿ |
08 | ಸೈಂಟ್ ಸಿಸಿಲಿನ್ ಪ್ರೌಢಶಾಲೆ ಬ್ರಹ್ಮಗಿರಿ ಉಡುಪಿ |
09 | ಆದಿ ಉಡುಪಿ ಪ್ರೌಢಶಾಲೆ ಆದಿ ಉಡುಪಿ |
10 | ಸರಕಾರಿ ಪದವಿ ಪೂರ್ವ ಕಾಲೇಜು ಸರ್ವೀಸ್ ಬಸ್ ಸ್ಟ್ಯಾಂಡ್ ಉಡುಪಿ |