Monday, November 25, 2024
Monday, November 25, 2024

ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿ ನರೇಂದ್ರ ಕುಮಾರ್ ಕೋಟ

ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿ ನರೇಂದ್ರ ಕುಮಾರ್ ಕೋಟ

Date:

ದಾ ಹೊಸತನದ ತುಡಿತ, ಮುಖದಲ್ಲಿ ನಗು, ಸೌಮ್ಯ ಸ್ವಭಾವ, ಸಾಹಿತಿಯಾಗಿ, ಗುರುವಾಗಿ, ಹಲವಾರು ಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿ, ಹಿರಿಯರಿಗೆ ಆಪ್ತರಲ್ಲಿ ಒಬ್ಬರಾಗಿ, ಪಾದರಸದಂತೆ ದಿನನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಒಂದಿಷ್ಟು ಪ್ರೇರಣೆಯ ಮಾತುಗಳನ್ನಾಡಿ, ಸ್ಥಳೀಯ ಸಂಘ ಸಂಸ್ಥೆಗಳಿಗೆ ದಾರಿ ದೀಪವಾಗಿ ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿಯಂತಿರುವ ಸಾಹಿತಿ-ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರು 2020-21ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇದು ಅರ್ಹತೆಗೆ ಸಂದ ಪ್ರಶಸ್ತಿಯೇ ಸರಿ. ಹೊಸತನದ ತುಡಿತ ನರೇಂದ್ರ ಕುಮಾರ್ ಅವರು ವೃತ್ತಿ ಜೀವನವನ್ನು ಕೋಟ ವಿವೇಕ ವಿದ್ಯಾ ಸಂಸ್ಥೆಯಲ್ಲಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸುತ್ತಾರೆ. ಶಾಲಾ ಅವಧಿಯಲ್ಲಿ ಪಠ್ಯೇತರ ಶಿಕ್ಷಣವನ್ನು ಬೋಧಿಸಿ ಉಳಿದ ಸಮಯವನ್ನು ಮಕ್ಕಳ ಬೌದ್ಧಿಕ ವಿಕಸನಕ್ಕೆ ಸಹಕಾರಿ ಆಗುವಂತಹ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಕ್ಕಳಿಗೆ ಪ್ರೇರೇಪಿಸುತ್ತಾರೆ. ಪ್ರತಿಭೆಗಳು ಅನಾವರಣಗೊಳ್ಳಲು ಸೂಕ್ತವಾದ ಒಂದು ವೇದಿಕೆ ಕಲ್ಪಿಸಬೇಕು ಎನ್ನುವ ಸದುದ್ದೇಶದಿಂದ ಬೇಸಿಗೆ ಶಿಬಿರದಂತಹ ಕಾರ್ಯಕ್ರಮ ಸಂಘಟಿಸಿದರು. ಅವರ ಆಸಕ್ತಿ ಕ್ಷೇತ್ರದಲ್ಲಿ ನಿರೂಪಣೆ ಕೂಡ ಒಂದು. ತನ್ನದೇ ಆದ ವಿಶಿಷ್ಟ ಛಾಪು, ಮೃದು ಧ್ವನಿಯೊಂದಿಗೆ ಕೇಳುಗರನ್ನು ತನ್ನತ್ತ ಆಕರ್ಷಿಸಬಲ್ಲವರು.

ತೆರೆಯ ಹಿಂದಿನ ಕೈ: ಅವರು ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಒಟ್ಟು 30 ಕ್ಕೂ ಮಿಕ್ಕಿ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ ಇದರಲ್ಲಿ ಸವಿ ಸವಿ ನೆನಪು 230, ಚಿಂತನ ದೀವಿಗೆ -45, ಸಿಬ್ಲು-34, ಕಾರಂತ ಮಹಾಸಾಗರ-34, ಬದುಕಿನ ಚುಕ್ಕಿಗಳು-19, ಹೃದಯದ ಹಾಡು-35 ಹಾಡೊಮ್ಮೆ ಹಾಡಬೇಕು ಇಂತಹದೇ ಹಲವಾರು ಸಂಚಿಕೆ ಕಾರ್ಯಕ್ರಮಗಳು ಸಮರ್ಥವಾಗಿ ನಡೆಸಿ ಪೇಕ್ಷಕರ ಮನಗೆದ್ದು ಈವಾಗಲೂ ಎಲ್ಲರ ಬಾಯಲ್ಲಿ ಮಾತಾಗಿದೆ.

ಸಾಂಸ್ಕೃತಿಕ ಅಪರಂಜಿ: ಇಲ್ಲಿಯ ತನಕ ಹಲವಾರು ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮವನ್ನು ತುಂಬಾ ಅರ್ಥಪೂರ್ಣವಾಗಿ ಸಂಘಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕುಂದಾಪ್ರ ಕನ್ನಡದ ಕಂಪನ್ನು ಕಾರ್ಯಕ್ರಮದ ಮೂಲಕ ಎಲ್ಲರನ್ನು ಬೆರಗುಗೊಳಿಸಿದ ಕಾರ್ಯಕ್ರಮ ಕಾಂಬ. ಮೊದಲ ಬಾರಿಗೆ ಕೋಟದಲ್ಲಿ ಆಯೋಜಿಸಿ ಇದು ಕೋಟ ಪರಿಸರದಲ್ಲಿ ಒಂದು ಇತಿಹಾಸವನ್ನೇ ಸೃಷ್ಟಿಸಿತ್ತು.

ಕಾರಂತ ಥೀಮ್ ಪಾರ್ಕ್ನ ಚಟುವಟಿಕೆಯ ಹಿಂದಿನ ರೂವಾರಿ: ಅವರು ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೊಸ ಹೊಸ ಆಲೋಚನೆಯಿಂದ ಪ್ರತಿ ತಿಂಗಳು ನಡೆಯುವ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮ ಕಳೆದ ಹತ್ತು ವರ್ಷಗಳಿಂದ ಆಯೋಜಿಸುವುದರ ಜೊತೆಗೆ, ಪ್ರತಿಷ್ಠಿತ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಯೋಜನೆ ಇವರದ್ದೇ. ಕೆಲವೊಂದು ತರಗತಿಗಳಿಗೆ ಸರಕಾರದಿಂದ ಅನೌಪಚಾರಿಕ ಶಿಕ್ಷಣ ಕೇಂದ್ರದ ಮಾನ್ಯತೆ ಲಭಿಸಿದ್ದು ಇವರ ಬಿಡದ ಪರಿಶ್ರಮದಿಂದ.

ಸಾಹಿತ್ಯ ಕ್ಷೇತ್ರದ ಮಿದುಳು ಮಿಂಚು: ಇವರ ಸಾಹಿತ್ಯ ಕೃಷಿಯಲ್ಲಿ ಈಗಾಗಲೇ 26 ಪುಸ್ತಕಗಳು ಹೊರಹೊಮ್ಮಿದ್ದು ಇನ್ನೂ 14 ಪುಸ್ತಕಗಳು ಪ್ರಕಟಣೆಯ ಅಂತಿಮ ಹಂತದಲ್ಲಿದೆ. 200 ಕ್ಕೂ ಮಿಕ್ಕಿದ ಕವನಗಳು, 23 ಕಥೆಗಳು, 150 ಲೇಖನಗಳು, 16 ವಿಶೇಷ ಅಂಕಣ ಪ್ರಕಟಗೊಂಡಿದ್ದು, ದಿನ ಪತ್ರಿಕೆ, ವಾರ ಪತ್ರಿಕೆಯಲ್ಲಿ ಇವರ ಲೇಖನ ಕವನಗಳು ರಾರಾಜಿಸುತ್ತಿರುತ್ತದೆ.

ಸಿನಿಮಾ ಲೋಕಕ್ಕೆ ಲಗ್ಗೆ: ಸಿನಿಮ ಮಾಡಬೇಕು ಎಂಬ ಕನಸು ಹೊತ್ತು ಅದನ್ನು ನನಸಾಗಿಸಿಕೊಂಡವರು ತಮ್ಮ ಸಂಸ್ಥೆಯ ನಿರ್ಮಾಣದ ಸಂಭಾಷಣೆ ಬರೆದು “ಸುಗಂಧಿ” ಎನ್ನುವ ಚಲನಚಿತ್ರ ನಿರ್ಮಾಣ ಮಾಡಿದರು. ಈ ಚಲನಚಿತ್ರ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಅವಕಾಶ ಪಡೆದುಕೊಂಡು ಪ್ರಥಮ ಪ್ರಯೋಗದಲ್ಲೇ ಯಶಸ್ಸನ್ನು ಕಂಡಿತು. ಈ ಚಿತ್ರದಲ್ಲಿ ಇವರು ಕೂಡಾ ಮೊದಲ ಬಾರಿ ಬಣ್ಣ ಹಚ್ಚಿದರು. ತದ ನಂತರ ಹಲವಾರು ಕಿರು ಚಿತ್ರದಲ್ಲಿ ಅಭಿನಯಿಸುದರ ಮೂಲಕ ಚಿತ್ರಕಥೆ, ಸಂಭಾಷಣೆ, ಧ್ವನಿ ನೀಡಿ ಸಿನಿಮಾ ಕ್ಷೇತ್ರದಲ್ಲೂ ತಮ್ಮ ಕಂಪನ್ನು ಬೀರಿದರು.

ಅರಸಿ ಬಂದವು ಹಲವಾರು ಪ್ರಶಸ್ತಿಗಳು: ಕ್ಷೇತ್ರಗಳಲ್ಲಿ ತನ್ನನ್ನು ಗುರುತಿಸಿಕೊಂಡು ಸಾಧನೆ ಮಾಡಿದ ಪ್ರತಿಫಲವಾಗಿ ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದವು. ಅವುಗಳಲ್ಲಿ ಮುಖ್ಯವಾಗಿ ಜಿಲ್ಲಾ ರಾಜ್ಯೋತ್ಸವ, ಆರ್ಯಭಟ, ರಾಷ್ಟ್ರಮಟ್ಟ ರವೀಂದ್ರನಾಥ್ ಟ್ಯಾಗೋರ್ ರಾಷ್ಟ್ರ‍ೀಯ ಪುರಸ್ಕಾರ ಹೀಗೆ ಹಲವಾರು ಪ್ರಶಸ್ತಿಗಳು ಇವರ ಕೈ ಸೇರಿವೆ. ಇದರ ಜೊತೆ ಹಲವಾರು ಸಂಘ-ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ. ಬದುಕು ಎನ್ನುವುದು ನಿಂತ ನೀರಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿ, ಡಾ. ಶಿವರಾಮ ಕಾರಂತರ ಆತ್ಮಕಥನ ಹುಚ್ಚು ಮನಸ್ಸಿನ ಹತ್ತು ಮುಖಗಳು ಎನ್ನುವ ಶೀರ್ಷಿಕೆಗೆ ನರೇಂದ್ರ ಕುಮಾರ್ ಅವರನ್ನು ಹೋಲಿಸಬಹುದೇನೋ. ತನ್ನನ್ನು ಹಲವಾರು ಕ್ರೇತ್ರದಲ್ಲಿ ತೊಡಗಿಸಿಕೊಂಡು ಆ ಕ್ಷೇತ್ರದಲ್ಲಿ ಹೊಸತನ ಅನ್ವೇಷಿಸಿ ಅದನ್ನು ಕಾರ್ಯಗತ ಮಾಡಿ ಯಶಸ್ಸನ್ನು ಕಾಣುವರು.

ಇವರ ಹೊಸತನದ ತುಡಿತ, ಇವರ ಸಾಧನೆ ಇಮ್ಮಡಿಯಾಗಲಿ, ಇವರ ಸಾಧನೆಯ ಪ್ರತಿಯೊಂದು ಹೆಜ್ಜೆ ಯುವ ಜನರಿಗೆ ಪ್ರೇರಣೆಯಾಗುತ್ತಾ ಇನ್ನಷ್ಟು ಪ್ರಶಸ್ತಿಗಳು ಅರಸಿ ಬರಲಿ ಎನ್ನುವ ಆಶಯ ನಮ್ಮದು.

ಪ್ರಶಾಂತ್ ಸೂರ್ಯ ಸಾಯ್ಬ್ರಕಟ್ಟೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...
error: Content is protected !!