Monday, November 25, 2024
Monday, November 25, 2024

ಪ್ರೀತಿಯ ಸೌಧಗಳನ್ನ ಗಟ್ಟಿಗೊಳಿಸೋಣ

ಪ್ರೀತಿಯ ಸೌಧಗಳನ್ನ ಗಟ್ಟಿಗೊಳಿಸೋಣ

Date:

ಸಂಬಂಧಗಳೆಲ್ಲಾ ಹೀಗೆಕೆ? ಅವುಗಳ‌ ಬಾಳಿಕೆ ಅಥವಾ ಆಯುಷ್ಯ ತೀರ ಕಮ್ಮಿ ಎನಿಸುವ ಮಟ್ಟಿಗೆ ಮುಗಿದು ಹೋಗಿ ಬಿಡುತ್ತಿದೆ. ಇತ್ತಿಚಿನ ದಿನಗಳಲ್ಲಿ ನಮ್ಮ ಸಂಬಂಧಗಳು ಕಡಲ ತೀರದ ಮರಳ ಮೇಲೆ ಬರೆದ ಅಕ್ಷರಗಳಂತೆ, ಚಿತ್ರಗಳಂತೆ ನಮ್ಮೊಳಗಿನ ಅ ಸಹಜವಾದ ಅಲೆಯ ಹೊಡೆತಗಳಿಗೆ ಅಳಿಸಿ ಹೋಗುತ್ತಿದೆಯಾ? ನನ್ನ ಪದೇ ಪದೇ ಕಾಡುವಂದದ್ದು ಇಂತಹ ಸಂಬಂಧಗಳೆ ಅದರಲ್ಲಿಯೂ ಮದುವೆ ಎಂಬ ಪವಿತ್ರ ಬಂಧದಲ್ಲಿ ಬೆಸೆದ ಸಾಂಪ್ರದಾಯಿಕ ಸಂಬಂಧಗಳು!

ನಾನು ಇಂತಹ ಸಂಬಂಧಗಳ ಬಗ್ಗೆ ತುಂಬಾ ಕುತೂಹಲದಿಂದ ನೋಡುತ್ತೇನೆ. ಮದುವೆಯಾದ ಮೂರು ದಿನಕ್ಕೆ ಮುರಿದು ಬಿದ್ದ ಹಲವು ಸಂಬಂಧಗಳನ್ನ ನೋಡಿದ್ದೇನೆ, ಕೇಳಿದ್ದೇನೆ. ಹಲವಾರು ಬಾರಿ ಎಷ್ಟೋ ವರ್ಷಗಳ ಸಂಸಾರಿಕ ಜೀವನ ನೆಡೆಸಿದ ಸಂಬಂಧಗಳು ಕಾರಣವಲ್ಲದ ಕಾರಣಗಳಿಗೆ ಮುರಿದು ಬಿದ್ದದ್ದನ್ನು ನೋಡಿದಾಗ ಬದುಕಿನ ಸಂಬಂಧಗಳ ಬಗೆಗಿನ ಭರವಸೆಗಳು ಕುಸಿದು ಬಿಡುತ್ತೆ!

ಈ ಸಂಬಂಧಗಳನ್ನ ಹಾಳು ಮಾಡುವಂತದ್ದು ಏನು? ನಮ್ಮೊಳಗಿನ ಮುನಿಸುಗಳ? ಇಲ್ಲ ಅಹಂಗಳು? ಅನುಮಾನಗಳೇ? ಗಂಡು ಹೆಣ್ಣುಗಳೆಂಬ ಭಾವನೆಗಳ? ಯೋಚಿಸಿದರೆ ಒಂದು ಹಂತದಲ್ಲಿ ಎಲ್ಲವೂ ಕಾರಣವೆ. ಈ ಎಲ್ಲಾ ಸಹಜ ಕಾರಣವಲ್ಲದ ಕಾರಣಗಳಿಗೆ ನಮ್ಮ ಪ್ರೀತಿಯ ಸಂಬಂಧಗಳು ಮುರಿಯಬಾರದು ಅಲ್ವ? ಹಾಗಿದ್ದರೆ ನಾವು ಅದನ್ನ ಹೇಗೆ ಉಳಿಸಿಕೊಳ್ಳಬೇಕು?

ಹೌದು ನಿಮಗೆ ಅವಳ / ಅವನ ಬಗ್ಗೆ ಅನುಮಾನಗಳಿವೆಯಾ, ಅಸಮಾಧಾನಗಳಿವೆಯಾ, ಇಲ್ಲ ಅವನು/ಅವಳ ಮಾತು ನೆಡವಳಿಕೆ, ನಿಮಗೆ ಸರಿ ಅನ್ನಿಸುತ್ತಿಲ್ಲವೇ, ಅಥವಾ ಅವನ/ಅವಳ ಪ್ರೀತಿ, ಕಾಳಜಿ ಕಮ್ಮಿಯಾಗಿದೆ ಅಥವಾ ಅದು ಇಲ್ಲ ಅನಿಸುತಿದೆಯಾ? ಇತ್ಯಾದಿ ಇತ್ಯಾದಿಗಳಿದ್ದರೆ, ನಾವು ಸ್ವಲ್ವ ಹೂತ್ತು ಕೂತು ಬಗೆಹರಿಸಿಕೂಳ್ಳಬೇಕು ಅಲ್ವ. ಎಕೆಂದರೆ ಆ ಸಂಬಂಧವೆಂಬ ಪ್ರೀತಿಯ ಸೌಧ ನಿಂತಿರುವುದು ನಿಮ್ಮಿಬ್ಬರ ಮೇಲೆ ತಾನೆ. ಹೌದು ಅದನ್ನ ಗಟ್ಟಿಗೂಳಿಸಲಿಕ್ಕೆ ನೀವು ಕೂತು ಮಾತನಾಡಲೇಬೇಕು.

ಒಂದು ಸರಿಯಾದ ಸಮಯ ಅದು ಸುಂದರ ಮುಂಜಾವೂ ಇಲ್ಲ ಸೂಬಗಿನ ಸಂಜೆಯೂ ೨ ಕಪ್ಪು ಕಾಫಿ ಇಲ್ಲ ಚಾಹದ ಜೊತೆಗೆ ಮುಖಾಮುಖಿಯಾಗಿ ಕೂತು ಬಿಡಿ. ಅದಕ್ಕಿಂತ ಮುಂಚೆ ನಿಮ್ಮಿಬ್ಬರ ನಡುವೆ ಅದು ಎಂತಹದೇ ನೆಡೆದಿರಬಹುದು ಜಸ್ಟ್ ಲೀವ್ ಇಟ್. ಇಬ್ಬರ ಮನಸ್ಸು, ಯೋಚನೆ ಸ್ವಾತಂತ್ರ್ಯವಾಗಿರಲಿ, ಮನಸು ಹಗುರ ಎನಿಸಿದ ಮೇಲೆ ನಿಧಾನಕ್ಕೆ ಮಾತು ಶುರು ಮಾಡಿ. ಅಲ್ಲಿ ಮತ್ತೆ ವಾದ, ಪ್ರತಿವಾದ ಅರೋಪಗಳು ಬೇಡ, ನೆನಪಿರಲಿ ನೀವು ಕೂತಿರುವುದು ಅದನ್ನ ಪರಿಹರಿಸಿಕೊಳ್ಳಲು ಅಲ್ವೆ? ಅಲ್ಲಿ ನಿಮ್ಮ ಎಲ್ಲಾ ಅನುಮಾನ, ಅಸಮಾಧಾನಗಳನ್ನ ಉತ್ತಮವಾಗಿ ಬಗೆಹರಿಸಿಕೊಳ್ಳಿ. ನಿಮ್ಮ ಮಾತುಗಳು ಸೌಮ್ಯವಾಗಿರಲಿ, ಅಲ್ಲಿ ಎಲ್ಲವುದರ ಬಗ್ಗೆ ಕೂತು ಮಾತಾಡಿ ಮುಂದಿನ ಭವಿಷ್ಯ, ನಿಮ್ಮ ಕನಸು, ತಯಾರಿ ಇತ್ಯಾದಿಗಳ ಬಗ್ಗೆ ಮಾತಾಡಿ. ಹೆಚ್ಚಾಗಿ ಇಬ್ಬರ ಅಭಿಪ್ರಾಯ, ಭಾವನೆಗಳನ್ನ ಒಪ್ಪಿಕೊಳ್ಳಿ, ಮತ್ತೆ ಗೌರವಿಸಿ ಕೂಡ. ಅಲ್ಲಿ ಅವಳು ಸೋಲಬೇಕು, ಅವನು ಸೋಲಬೇಕು ಅಂತ ಭಾವನೆ ಬೇಡ. ಅದು ನಿಮ್ಮ ಸಂಬಂಧವನ್ನು ಮತ್ತೆ ಕೊಂದುಬಿಡುತ್ತೆ. ಅಲ್ಲಿ ಇಬ್ಬರೂ ಸೋಲಬೇಕು ಮತ್ತು ಇಬ್ಬರೂ ಗೆಲ್ಲಬೇಕು. ಆಗ ನಿಮ್ಮ ಸಂಬಂಧ ಗೆಲ್ಲುವುದು ಮಾತ್ರವಲ್ಲ ಗಟ್ಟಿಯಾಗುತ್ತೆ ಕೂಡ.

ನಿಮ್ಮಿಬ್ಬರ ನಡುವಿನ ಮಾತುಕತೆ, ಮೌನ, ಅನುಮಾನ, ಅಸಮಾಧಾನಗಳು ನಶಿಸಿದ ಮೇಲೆ, ನಿಮ್ಮಿಬ್ಬರ ತುಟಿಯ ಅಂಚಿನಲ್ಲಿ ಪ್ರೀತಿ ತುಂಬಿದ ನಗು ಹಾಗೂ ನಿಮ್ಮಿಬ್ಬರ ನಡುವೆ ಒಂದು ಗಟ್ಟಿಯಾದ ಅಪ್ಪುಗೆವಿರಲಿ. ಆ ಆಪ್ಪುಗೆಯಲ್ಲಿ ಪ್ರೀತಿ, ಮುಂದೆ ಇಂತವುಗಳು ಘಟಿಸಲ್ಲವೆಂಬ ಭರವಸೆ, ಕಾಳಜಿ ಎಲ್ಲವೂ ಇರಲಿ. ನಿಮ್ಮ ಪ್ರೀತಿಯ ಸೌಧ ಮತ್ತಷ್ಟು ಗಟ್ಟಿಯಾಗಲಿ ಅದು ಬಹುದೂರ ಸಾಗಲಿ. ಚಹಾದ ಗುಟುಕಿನ ಸ್ವಾಹದ ಜೊತೆಗೆ ಆ ಅಪ್ಪುಗೆಯು ಹಿತ ನಿಮ್ಮನ್ನ ಕಾಡುತಿರಲಿ ಮುಂದಕ್ಕೆ ಮತ್ತೆಲ್ಲವೂ ಸೂಗಸು. ಅಲ್ಲಿ ನೀವು ಮತ್ತು ನೀವಿಬ್ಬರೆ.

-ಶರತ್ ಕೆ ಎಸ್
ಅಸೋಡು ಕುಂದಾಪುರ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!