Friday, September 20, 2024
Friday, September 20, 2024

ಬುಡೋಕಾನ್ ಕರಾಟೆ ಆಂಡ್ ‌ಸ್ಪೋರ್ಟ್ಸ್ ಅಸೋಸಿಯೇಶನ್- ತರಬೇತಿ ಕೇಂದ್ರ ಉದ್ಘಾಟನೆ

ಬುಡೋಕಾನ್ ಕರಾಟೆ ಆಂಡ್ ‌ಸ್ಪೋರ್ಟ್ಸ್ ಅಸೋಸಿಯೇಶನ್- ತರಬೇತಿ ಕೇಂದ್ರ ಉದ್ಘಾಟನೆ

Date:

ಉಡುಪಿ: ಬುಡೋಕಾನ್ ಕರಾಟೆ ಆಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಉಡುಪಿ ಇದರ ನೂತನ ತರಬೇತಿ ಕೇಂದ್ರವು ಇಂದ್ರಾಣಿ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು. ಇಂದ್ರಾಳಿಯ ನೂತನ ಕರಾಟೆ ತರಗತಿ ಕೇಂದ್ರವನ್ನು ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ. ಉಡುಪಿ ಇದರ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿ, ಪ್ರಸಕ್ತ ದಿನಗಳಲ್ಲಿ ಕರಾಟೆ ಕಲೆಯನ್ನು ಕರಗತ ಮಾಡಿಕೊಳ್ಳುವ ಔಚಿತ್ಯವನ್ನು ಒತ್ತಿ ಹೇಳಿ ಶುಭ ಹಾರೈಸಿದರು.

ಬುಡೊಕಾನ್ ಕರಾಟೆ ಆಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಇದರ ಮುಖ್ಯ ಶಿಕ್ಷಕ ರೆಂಷಿ ವಾಮನ್ ಪಾಲನ್ ಸಂಸ್ಥೆಯ ಪರಿಚಯವನ್ನು ನೀಡಿ ಕರಾಟೆ ಕಲೆಯ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳಾದ ಇಂದ್ರಾಣಿ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪಕ ಶ್ರೀಧರ್ ಭಟ್ ಹಾಗೂ ನಗರಸಭಾ ಸದಸ್ಯ ಅಶೋಕ್ ನಾಯ್ಕ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಮತ್ತು ಸಾಮಾಜಿಕ ಮುಂದಾಳು ರತ್ನಾಕರ ಎಸ್. ಇಂದ್ರಾಳಿ ಇವರು ಅಧ್ಯಕ್ಷೀಯ ನುಡಿಗಳನ್ನಾಡಿ ನೂತನ ಕರಾಟೆ ಕೇಂದ್ರಕ್ಕೆ ಶುಭ ಹಾರೈಸಿದರು. ಕರಾಟೆ ತರಗತಿಯ ಶಿಕ್ಷಕ ನಿಶಾಂತ್ ಉಪಸ್ಥಿತರಿದ್ದರು.

ಬುಡೋಕಾನ್ ಕರಾಟೆ ಎಂಡ್ ‌ಸ್ಪೋರ್ಟ್ಸ್ ಅಸೋಸಿಯೇಷನ್ ಸದಸ್ಯರಾದ ರಿಶಾ ಪ್ರಾರ್ಥನೆ ಹಾಡಿದರು. ಸಂಸ್ಥೆಯ ಸದಸ್ಯ ಮಹಮ್ಮದ್ ರಾಹಿಲ್ ಸ್ವಾಗತಿಸಿ, ಕಾರ್ಯದರ್ಶಿ ಸೆಂಶೈ ಮೇಘ ವಂದನಾರ್ಪಣೆಗೈದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!