Wednesday, October 2, 2024
Wednesday, October 2, 2024

ಫಿಟ್ ರಹೋ ಉಡುಪಿ- 75 ಕಿಮಿ ಓಟಕ್ಕೆ ಚಾಲನೆ

ಫಿಟ್ ರಹೋ ಉಡುಪಿ- 75 ಕಿಮಿ ಓಟಕ್ಕೆ ಚಾಲನೆ

Date:

ಉಡುಪಿ: ನೇಶನ್ ಫಸ್ಟ್ ತಂಡದ ವತಿಯಿಂದ ಫಿಟ್ ರಹೋ ಉಡುಪಿ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಿರುವ 75 ಕಿಮಿ ಮ್ಯಾರಥಾನ್ ಓಟಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಉಡುಪಿ ಚರ್ಚಿನ ಧರ್ಮಗುರುಗಳಾದ ಚಾರ್ಲ್ಸ್ ಮಿನೇಜಸ್, ಶಾಸಕ ಕೆ. ರಘುಪತಿ ಭಟ್ ಕ್ಲಾಕ್ ಟವರ್ ಬಳಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ ಎ, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಸ್ಥಳೀಯ ನಗರಸಭಾ ಸದಸ್ಯ ಟಿ.ಜಿ ಹೆಗ್ಡೆ, ಮೇಜರ್ ಪ್ರಕಾಶ್ ರಾವ್,  ನೇಶನ್ ಫಸ್ಟ್ ತಂಡದ ಸೂರಜ್ ಕಿದಿಯೂರು ಮುಂತಾದವರು ಉಪಸ್ಥಿತರಿದ್ದರು.

ಓಟ ಮನೋಳಿಗುಜ್ಜಿ ತಲುಪಿದಾಗ ದೊಡ್ಡಣಗುಡ್ಡೆ ಮಸೀದಿ ಧರ್ಮಗುರುಗಳಾದ ನಜೀರ್ ಅಹಮ್ಮದ್ ಆಶೀರ್ವಚಿಸಿ ಶುಭ ಹಾರೈಸಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಮ್ಯಾರಥಾನ್ ಓಟ ಮಾಹೆ ಮಣಿಪಾಲ ತಲುಪಿದಾಗ ಮಾಹೆ ಕುಲಪತಿಗಳಾದ ಎಂ.ಡಿ. ವೆಂಕಟೇಶ್ ಹಾಗೂ ಸಹ ಕುಲಾಧಿಪತಿಗಳಾದ ಎಚ್. ಎಸ್. ಬಲ್ಲಾಳ್ ಶಾಸಕ ಕೆ. ರಘುಪತಿ ಭಟ್ ರವರು ಸ್ವಾಗತಿಸಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಕಿನ್ನಿಮೂಲ್ಕಿ ಸ್ವಾಗತ ಗೋಪುರ ತಲುಪಿದಾಗ ರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಪಂಡರಿನಾಥ ಭಜನಾ ಮಂದಿರದಲ್ಲಿ ಭಜನಾ ಮಂದಿರದ ಉಪಾಧ್ಯಕ್ಷ ಭುವನ್ ಕೋಟ್ಯಾನ್ ಹಾಗೂ ಕರಾವಳಿ ಕಾವಲು ಪಡೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಲ್ಫಿ ತುಳಜಪ್ಪ ಹಸಿರು ನಿಶಾನೆ ತೋರಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇರಾನ್‌ ಕ್ಷಿಪಣಿ ದಾಳಿ- ಭದ್ರತಾ ಮುಖ್ಯಸ್ಥರೊಂದಿಗೆ ಇಸ್ರೇಲ್ ಪ್ರಧಾನಿ ಮಹತ್ವದ ಸಭೆ

ಯು.ಬಿ.ಎನ್.ಡಿ., ಅ.2: ಇಸ್ರೇಲ್‌ನ ಮೇಲೆ ಇರಾನ್‌ನ ನಡೆಸಿದ ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ,...

ಹೂಡೆ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ

ಹೂಡೆ, ಅ.2: ರೋಟರಿ ಜಿಲ್ಲೆ 3182 ಇದರ ಮಹತ್ವದ ಯೋಜನೆ ಕೋಸ್ಟ್...

ವಿಜೃಂಭಣೆಯಿಂದ ನಡೆಯಲಿದೆ ಮೈಸೂರು ದಸರಾ

ಮೈಸೂರು, ಅ.2: ಅಕ್ಟೋಬರ್‌ 3 ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ...

ರಾಮೋಜಿ ಫಿಲ್ಮ್ ಸಿಟಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಾಣ

ಬೆಂಗಳೂರು, ಅ.2: ಹೈದರಾಬಾದ್‌ನಲ್ಲಿರುವ ರಾಮೋಜಿ ಫಿಲ್ಮ್‌ ಸಿಟಿ ಮಾದರಿಯಲ್ಲೇ ಚಿತ್ರನಗರಿ ನಿರ್ಮಾಣವಾಗಬೇಕು....
error: Content is protected !!