ಬೆಳ್ಮಣ್: ಜೇಸಿಐ ಬೆಳ್ಮಣ್ಣು, ಜೂನಿಯರ್ ಜೇಸಿ ವಿಭಾಗ ಮತ್ತು ಜೇಸಿರೇಟ್ ವಿಭಾಗದ ಸಹಯೋಗದಲ್ಲಿ ಬೆಳ್ಮಣ್ಣು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿದ ವಲಯಾಧ್ಯಕ್ಷರ ಅಧಿಕೃತ ಭೇಟಿ ಸಮಾರಂಭದಲ್ಲಿ ಭಾರತೀಯ ಜೇಸಿಐನ ವಲಯ 15ರ ವಲಯಾಧ್ಯಕ್ಷರಾದ ಸೌಜನ್ಯ ಹೆಗ್ಡೆ ಭಾಗವಹಿಸಿ ಬೆಳ್ಮಣ್ಣು ಜೇಸಿಐನ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭಕ್ಕೂ ಮೊದಲು ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನಕ್ಕೆ ಭೇಟಿ ನೀಡಿ, ಬೆಳ್ಮಣ್ಣು ಶ್ರೀ ಲಕ್ಷ್ಮೀ ಜನಾರ್ಧನ ಇಂಟರ್‌ನ್ಯಾಶನಲ್ ಸ್ಕೂಲ್ ಬಳಿ ದಾರಿಸೂಚನಾ ನಾಮಫಲಕ ಉದ್ಘಾಟನೆ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಬಳಿ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ಗೆ ಡೆಸ್ಟ್ಬಿನ್ ಹಸ್ತಾಂತರ, ಅಬ್ಬನಡ್ಕ ಬಳಿ ಹಾಗೂ ಇಟ್ಟಮೇರಿ ಬಳಿ ದಾರಿಸೂಚನಾ ಫಲಕಗಳ ಲೋಕಾರ್ಪಣೆ ನಂತರ ಬೆಳ್ಮಣ್ಣು ಶ್ರೀ ದುರ್ಗಾಪಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.
ಸಭಾ ಕಾರ್ಯಕ್ರಮದಲ್ಲಿ ಕೆದಿಂಜೆ ಅಂಗನವಾಡಿ ಕೇಂದ್ರಕ್ಕೆ 40 ಕುರ್ಚಿ ಕೊಡುಗೆ ಹಸ್ತಾಂತರ ಹಾಗೂ ಎರಡು ವಾಕರ್‌ಗಳ ಕೊಡುಗೆ ಹಸ್ತಾಂತರ ಮತ್ತು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧನೆ ನಡೆಯಿತು. ಸಮಾರಂಭದಲ್ಲಿ ಬೆಳ್ಮಣ್ಣು ಜೇಸಿಐ ಫಟಕಾಧ್ಯಕ್ಷ ಕೃಷ್ಣ ಪವಾರ್ ಅಧ್ಯಕ್ಷತೆ ವಹಿಸಿದ್ದರು.
ಪೂರ್ವ ವಲಯಾಧ್ಯಕ್ಷ ರಾಜೇಂದ್ರ ಭಟ್ ಕೆ, ವಲಯ ಉಪಾಧ್ಯಕ್ಷ ಸತ್ಯನಾರಾಯಣ ಭಟ್, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ದೀಪಕ್ ಗಂಗೊಳ್ಳಿ, ಕಾರ್ಯಕ್ರಮದ ನಿರ್ದೇಶಕ ಅಶ್ವಥ್ ಶೆಟ್ಟಿ, ಜೇಸಿರೇಟ್ ವಿಭಾಗದ ಅಧ್ಯಕ್ಷೆ ಮಾಯಾ ರಾವ್, ಜೂನಿಯರ್ ಜೇಸಿ ವಿಭಾಗದ ಅಧ್ಯಕ್ಷ ಪ್ರಥಮ್ ಮಲ್ಯ, ಘಟಕದ ಪೂರ್ವಾಧ್ಯಕ್ಷರು ಮತ್ತು ಸದಸ್ಯರು ಮೊದಲಾದವರಿದ್ದರು.
ಬೆಳ್ಮಣ್ಣು ಜೇಸಿಐನ ಘಟಕಾಧ್ಯಕ್ಷ ಕೃಷ್ಣ ಪವಾರ್ ಸ್ವಾಗತಿಸಿ, ಪೂರ್ವಾಧ್ಯಕ್ಷ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ವಲಯಾಧ್ಯಕ್ಷರನ್ನು ಪರಿಚಯಿಸಿದರು. ಕಾರ್ಯದರ್ಶಿ ಅಬ್ಬನಡ್ಕ ಸತೀಶ್ ಪೂಜಾರಿ ವರದಿ ಮಂಡಿಸಿ ವಂದಿಸಿದರು.