ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಮ್ ಗಳಲ್ಲಿ ನಕಲಿ ಕಾರ್ಡುಗಳನ್ನು ಬಳಸಿ ಹಣ ಕದಿಯುತ್ತಿದ್ದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಕಲಿ ಕಾರ್ಡ್ ಬಳಸಿ ಹಣ ದೋಚುತ್ತಿರುವುದನ್ನು ನೋಡಿದ ಬ್ಯಾಂಕ್ ಸಿಬ್ಬಂದಿ, ಬೆಂಗಳೂರು ನಗರ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ಘಟನೆ ಬಗ್ಗೆ ಹೇಳಿದರು. ತಕ್ಷಣ ಕಾರ್ಯಪ್ರವೃತ್ತರಾದ ಹೊಯ್ಸಳ ಪೊಲೀಸ್ ಸಿಬ್ಬಂದಿಗಳಾದ ಎ.ಎಸ್.ಐ ಮುನಿವೆಂಕಟಪ್ಪ ಮತ್ತು ಪಿ.ಸಿ. ಮಂಜುನಾಥ್ ರವರು ಸ್ಥಳಕ್ಕೆ ಹೋಗಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಹರಿಯಾಣ ರಾಜ್ಯದವರೆಂದು ತಿಳಿದುಬಂದಿದೆ.