ಉಡುಪಿ: ಉಡುಪಿ ಜಿಲ್ಲೆಯಲ್ಲಿ 176 ಮಂದಿಗೆ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕು-96, ಕುಂದಾಪುರ-37, ಕಾರ್ಕಳ-40, ಹೊರ ಜಿಲ್ಲೆಯ ಮೂವರು ಸೋಂಕಿಗೆ ಒಳಗಾಗಿದ್ದಾರೆ. 80 ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೆ 70622 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 1421 ಸಕ್ರಿಯ ಪ್ರಕರಣಗಳಿವೆ.
ಸೋಂಕಿನಿಂದ ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಇಲ್ಲಿಯವರೆಗೆ 438 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಆಗಸ್ಟ್ 20 ರಂದು 6429 ಮಾದರಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 878148 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಇಂದು ಅತ್ಯಧಿಕ ದೈನಂದಿನ ಪಾಸಿಟಿವ್ ಪ್ರಕರಣ ವರದಿಯಾದ ಮೂರು ಜಿಲ್ಲೆಗಳು:
ಬೆಂಗಳೂರು ನಗರ- 352
ದಕ್ಷಿಣ ಕನ್ನಡ- 341
ಉಡುಪಿ- 176
ಅತ್ಯಧಿಕ ಸಕ್ರಿಯ ಪ್ರಕರಣಗಳಿರುವ ಮೂರು ಜಿಲ್ಲೆಗಳು:
ಬೆಂಗಳೂರು ನಗರ- 7912
ದಕ್ಷಿಣ ಕನ್ನಡ- 3285
ಉಡುಪಿ- 1421