ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಗಳಿಸಿದ ಸುಬೇದಾರ್ ನೀರಜ್ ಚೋಪ್ರಾ ಮತ್ತು ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ಕುಸ್ತಿಪಟು ಸುಬೇದಾರ್ ದೀಪಕ್ ಪುನಿಯಾ ಅವರಿಗೆ 6 ಲಕ್ಷ ಮತ್ತು 4.55 ಲಕ್ಷ ರೂಪಾಯಿ ಚೆಕ್ ನೀಡಿ ರಜಪೂತಾನ ರೈಫಲ್ಸ್ ಕರ್ನಲ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಸನ್ಮಾನಿಸಿದರು.
ಇಬ್ಬರೂ ಕ್ರೀಡಾಪಟುಗಳು ರಜಪೂತಾನ ರೈಫಲ್ಸ್ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.