ಟೋಕಿಯೊ: ಮಹಿಳಾ ಹಾಕಿ ’ಪೂಲ್ ಎ’ ಪಂದ್ಯದಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ 4-3 ಗೋಲುಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದೆ. ತನ್ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಆಸೆ ಜೀವಂತವಾಗಿರಿಸಿದೆ.
ವಂದನಾ ಕತಾರಿಯಾ ಹ್ಯಾಟ್ರಿಕ್ ಭಾರತಕ್ಕೆ ವರದಾನವಾಗಿ ಪರಿಣಮಿಸಿತು. ತನ್ನ ಗ್ರೂಪ್ ಹಂತದ 5 ಪಂದ್ಯಗಳಲ್ಲಿ ಇದು ಭಾರತದ ಎರಡನೆಯ ಗೆಲುವಾಗಿದೆ.