ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಶುಭಾರಂಭ ಮಾಡಿದೆ. ಶನಿವಾರ ನಡೆದ ಮಹಿಳಾ ವಿಭಾಗದ ವೇಟ್‌ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಭಾರತಕ್ಕೆ ಬೆಳ್ಳಿತಾರೆಯಾಗಿ ಮೂಡಿಬಂದಿದ್ದಾರೆ.
26ರ ಹರೆಯದ ಚಾನು ಸ್ಯಾಚ್ ವಿಭಾಗದಲ್ಲಿ 87 ಕೆಜಿ ಮತ್ತು ಕ್ಲೀನ್ ಜರ್ಕ್ ವಿಭಾಗದಲ್ಲಿ 115 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಇದರೊಂದಿಗೆ ಕರ್ಣಂ ಮಲ್ಲೇಶ್ವರಿಯವರ ನಂತರ, ಚಾನು ಭಾರ ಎತ್ತುವ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ವಿಜೇತ ಎರಡನೇ ಭಾರತೀಯ ವೇಟ್‌ಲಿಫ್ಟರ್ ಎಂಬ ದಾಖಲೆ ನಿರ್ಮಿಸಿದರು. ಕರ್ಣಂ ಮಲ್ಲೇಶ್ವರಿ 2000ರದ ಸಿಡ್ನಿ ಒಲಿಂಪಿಕ್ಸ್ ನಲ್ಲಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.
ಪದಕ ವಿಜೇತ ಚಾನುರವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.