ಪರ್ತಗಾಳಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮಠಗಳಲ್ಲೊಂದಾಗಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮಠಾಧೀಶ ಶ್ರೀ ಶ್ರೀ ವಿದ್ಯಾಧಿರಾಜವಡೇರ್ ಸ್ವಾಮೀಜಿಯವರು ಸೋಮವಾರ ಗೋವಾದ ಪರ್ತಗಾಳಿ ಮಠದಲ್ಲಿ ಅಸ್ತಂಗತರಾದರು.
1475ರಲ್ಲಿ ಹಿಮಾಲಯದ ಬದರಿಕಾಶ್ರಮದಲ್ಲಿ ಉದಯಿಸಿದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠವು 530 ವರ್ಷಗಳ ಶ್ರೀಮಂತ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಗೋಕರ್ಣ ಮಠಾಧೀಶ ಶ್ರೀ ಶ್ರೀ ವಿದ್ಯಾಧಿರಾಜವಡೇರ್ ಸ್ವಾಮೀಜಿಯವರು ಸಂಸ್ಥಾನದ 23ನೇ ಯತಿಗಳಾಗಿ ಫೆಬ್ರವರಿ 26, 1967ರಲ್ಲಿ ಮುಂಬಯಿ ವಡಾಲ ರಾಮಮಂದಿರಲ್ಲಿ ತಮ್ಮ ಗುರುಗಳಾದ ಶ್ರೀ ದ್ವಾರಕಾನಾಥ ತೀರ್ಥ ಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರು.
2016ರಲ್ಲಿ ತಮ್ಮ ಸನ್ಯಾಸ ದೀಕ್ಷೆ ಸ್ವೀಕಾರದ ಸುವರ್ಣ ಮಹೋತ್ಸವದ ಪ್ರಯುಕ್ತ ಮಂಗಳೂರಿನಲ್ಲಿ ಸುವರ್ಣ ಚಾತುರ್ಮಾಸ ವೃತವನ್ನು ಆಚರಿಸಿದ್ದರು.
2017ರ ಫೆಬ್ರವರಿ 8 ಮತ್ತು 9ರಂದು ನಡೆದ ಸಮಾರಂಭದಲ್ಲಿ ಅವರು ತಮ್ಮ ಶಿಷ್ಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರಿಗೆ ದೀಕ್ಷೆ ನೀಡಿದ್ದರು.
ಪೇಜಾವರ ಶ್ರೀ ಸಂತಾಪ:
ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀ ಶ್ರೀ ವಿದ್ಯಾಧಿರಾಜವಡೇರ್ ಸ್ವಾಮೀಜಿಯವರ ಅಸ್ತಂಗತದ ಸುದ್ಧಿ ತಿಳಿದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀರ್ವ ಸಂತಾಪ ವ್ಯಕ್ತಪಡಿಸಿದ್ದಾರೆ.
“ಗೋಕರ್ಣ ಶ್ರೀಗಳು ಮಧ್ವಸಿದ್ಧಂತಾದ ಬಗ್ಗೆ ವಿಶೇಷ ನಿಷ್ಠೆಯುಳ್ಳವರಾಗಿದ್ದು ಜೀವನಪರ್ಯಂತ ಶ್ರದ್ಧೆಯಿಂದ ಪಾಲಿಸಿ ಸಮಾಜಕ್ಕೆ ಉತ್ತಮ ಮಾರ್ಗದರ್ಶಕರಾಗಿದ್ದರು. ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದುದನ್ನು ವಿಶೇಷವಾಗಿ ಸ್ಮರಿಸುತ್ತೇವೆ” ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಗಣ್ಯರ ಸಂತಾಪ: