Tuesday, September 24, 2024
Tuesday, September 24, 2024

ಜುಲೈ 14 ರಂದು ಎರಡನೇ ಡೋಸ್ ಲಸಿಕೆ ಲಭ್ಯ

ಜುಲೈ 14 ರಂದು ಎರಡನೇ ಡೋಸ್ ಲಸಿಕೆ ಲಭ್ಯ

Date:

ಜಿಲ್ಲೆಯಲ್ಲಿ ಜುಲೈ 14 ರಂದು ಉಡುಪಿ ನಗರ ಪ್ರದೇಶದ ಕೊರೋನ ಮುಂಚೂಣಿ ಕಾರ್ಯಕರ್ತರು, ದುರ್ಬಲ ಗುಂಪಿನ ಫಲಾನುಭವಿಗಳು, ಆದ್ಯತಾ ಗುಂಪಿನವರು, ಆರೋಗ್ಯ ಕಾರ್ಯಕರ್ತರು, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರುಗಳಿಗೆ ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್-19 2ನೇ ಡೋಸ್ ಲಸಿಕೆ ಲಭ್ಯವಿರುತ್ತದೆ.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ (ಸೇಂಟ್ ಸಿಸಿಲಿ ಶಾಲೆ) 2 ನೇ ಡೋಸ್ ಕೋವಿಶೀಲ್ಡ್ 150 ಡೋಸ್, ಮಣಿಪಾಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಮಾಧವ ಕೃಪಾ ಶಾಲೆ) 2 ನೇ ಡೋಸ್ ಕೋವಿಶೀಲ್ಡ್ -150 ಡೋಸ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿಯ ಹಳೆ ಕಟ್ಟಡದಲ್ಲಿ (ಅಲಂಕಾರ್ ಥಿಯೇಟರ್ ಹತ್ತಿರ) 2 ನೇ ಡೋಸ್ ಕೋವಿಶೀಲ್ಡ್ 150 ಡೋಸ್, ಕುಕ್ಕಿಕಟ್ಟೆಯ ಎಫ್.ಪಿ.ಎ.ಐ ನಲ್ಲಿ (ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ) 2 ನೇ ಡೋಸ್ ಕೋವಿಶೀಲ್ಡ್ 100 ಡೋಸ್ ಹಾಗೂ ನಗರದ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜುಲೈ 20 ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ 100 ಡೋಸ್ ಲಸಿಕೆಯನ್ನು ಬೆಳಗ್ಗೆ 11 ಗಂಟೆಯಿAದ ಸಂಜೆ 4.30 ರ ವರೆಗೆ ನೀಡಲಾಗುವುದು.

ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು, ದುರ್ಬಲ ಗುಂಪಿನ ಫಲಾನುಭವಿಗಳು, ಆರೋಗ್ಯ ಕಾರ್ಯಕರ್ತರು, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್-19 2 ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಸರಾ ಸಮಯದಲ್ಲಿ ಕಾವೇರಿ ಐದನೇ ಹಂತಕ್ಕೆ ಚಾಲನೆ: ಡಿಕೆಶಿ

ಬೆಂಗಳೂರು, ಸೆ.24: ಬೆಂಗಳೂರು ನಗರದ ಮೂಲೆ ಮೂಲೆಗೂ ಕಾವೇರಿ ನೀರನ್ನು ತಲುಪಿಸುವ...

ನೂತನ ಆ್ಯಂಬುಲೆನ್ಸ್‌ಗಳಿಗೆ ಚಾಲನೆ

ಬೆಂಗಳೂರು, ಸೆ.24: ರಸ್ತೆ ಅಪಾಘಾತಕ್ಕೀಡಾದವರಿಗೆ ಗೋಲ್ಡನ್ ಅವರ್‌ ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ...

ಸೆ.26: ಕೆಎಚ್‌ಐಆರ್‌ ಸಿಟಿ ಮೊದಲ ಹಂತಕ್ಕೆ ಚಾಲನೆ

ಬೆಂಗಳೂರು, ಸೆ.24: ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರಗಳು ಒಂದೆಡೇ...

ಸುದ್ದಿಗಳ ಫ್ಯಾಕ್ಟ್ ಚೆಕ್ ಮಾಡಲು ಠಾಣೆಗಳಲ್ಲಿ ಪ್ರತ್ಯೇಕ ತಂಡ

ಬೆಂಗಳೂರು, ಸೆ.24: ಫೇಕ್‌ ನ್ಯೂಸ್‌ ಸೃಷ್ಟಿಕರ್ತರಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ...
error: Content is protected !!