ತಾಂತ್ರಿಕ ಸಲಹಾ ಸಮಿತಿಯ ಸಲಹೆ ಮೇರೆಗೆ ಸಚಿವ ಸಂಪುಟದ ಸಭೆಯ ಬಳಿಕ ಈ ಕೆಳಕಂಡ ಸಡಿಲಿಕೆ/ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಶನಿವಾರ ನಡೆದ ಸಭೆಯ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾರ್ಗಸೂಚಿಗಳನ್ನು ಪ್ರಕಟಿಸಿದರು.
ಜುಲೈ 5ರಂದು ಬೆಳಿಗ್ಗೆ 6 ಗಂಟೆಯಿಂದ ಜುಲೈ 19 ಬೆಳಿಗ್ಗೆ 6 ಗಂಟೆಯವರೆಗೆ ಈ ಕೆಳಕಂಡ ಮಾರ್ಗಸೂಚಿಗಳು ಜಾರಿಯಲ್ಲಿರಲಿದೆ.
ಮಾರ್ಗಸೂಚಿಯಲ್ಲಿ ಏನಿದೆ?
1. ಸರ್ಕಾರಿ ಕಛೇರಿ/ ಖಾಸಗಿ ಕಛೇರಿಗಳಲ್ಲಿ ಶೇ. 100 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು.
2. ಮಾಲ್ ತೆರೆಯಲು ಅವಕಾಶ.
3. ಮೆಟ್ರೋ, ಸಾರ್ವಜನಿಕ ಸಾರಿಗೆಗಳಲ್ಲಿ ಸೀಟಿನ ಮಿತಿವರೆಗೆ ಮಾತ್ರ ಪ್ರಯಾಣಿಕರಿಗೆ ಅವಕಾಶ.
4. ಧಾರ್ಮಿಕ ಕೇಂದ್ರಗಳಲ್ಲಿ ದರ್ಶನಕ್ಕೆ ಅವಕಾಶ, ಸೇವೆಗಳಿಗೆ ಅವಕಾಶವಿಲ್ಲ.
5. ಮದುವೆ/ ಕೌಟುಂಬಿಕ ಸಮಾರಂಭಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ 100 ಮಂದಿ ಭಾಗವಹಿಸಬಹುದು.
6. ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಮಾತ್ರ ತರಬೇತಿಗೆ ಅವಕಾಶ.
7. ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ, ಪ್ರೇಕ್ಷಕರಿಗೆ ಅನುಮತಿ ಇಲ್ಲ.
8. ಅಂತ್ಯ ಸಂಸ್ಕಾರಗಳಲ್ಲಿ 20 ಮಂದಿ ಭಾಗವಹಿಸಬಹುದು.
9. ಪ್ರತಿನಿತ್ಯ ರಾತ್ರಿ ಕರ್ಫ್ಯೂ (ನೈಟ್ ಕರ್ಫ್ಯೂ- ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ)
10. ವಾರಾಂತ್ಯ (ವೀಕೆಂಡ್ ಕರ್ಫ್ಯೂ) ಇರುವುದಿಲ್ಲ.
11. ಸಾಮಾಜಿಕ, ಧಾರ್ಮಿಕ, ಪ್ರತಿಭಟನೆ, ರಾಜಕೀಯ ಸಮಾರಂಭಗಳಿಗೆ ಅವಕಾಶವಿಲ್ಲ.
12. ಶೈಕ್ಷಣಿಕ ಸಂಸ್ಥೆ, ಟ್ಯುಟೋರಿಯಲ್ ಮುಂದಿನ ಆದೇಶ ಬರುವವರೆಗೆ ತೆರೆಯುವಂತಿಲ್ಲ. ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ಸಭೆಯ ಮೂಲಕ ತೀರ್ಮಾನ ಕೈಗೊಳ್ಳಲಾಗುವುದು.
13. ಪಬ್ ಗಳನ್ನು ತೆರೆಯುವಂತಿಲ್ಲ.
14. ಬಾರ್ ತೆರೆಯಬಹುದು.
15. ಚಿತ್ರಮಂದಿರ ತೆರೆಯಲು ಅವಕಾಶವಿಲ್ಲ.
16. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕೈಗಳನ್ನು ಸ್ವಚ್ಛವಾಗಿಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸ್ಯಾನಿಟೈಸರ್ ಬಳಸಬೇಕು.
ಆಯಾ ಜಿಲ್ಲಾಧಿಕಾರಿಗಳಿಗೆ/ ಉಸ್ತುವಾರಿ ಸಚಿವರುಗಳಿಗೆ ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಕ್ರಮಗಳನ್ನು ಕೈಗೊಳ್ಳಲು ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.