Friday, September 20, 2024
Friday, September 20, 2024

ಕಾರ್ಕಳ: ಚಿತ್ರಕೂಟ ಪೋಷಕ್ ವಿತರಣೆ

ಕಾರ್ಕಳ: ಚಿತ್ರಕೂಟ ಪೋಷಕ್ ವಿತರಣೆ

Date:

ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಚಿತ್ರಕೂಟ ಪೋಷಕ್ ಇದರ 250 ಪೊಟ್ಟಣಗಳನ್ನು ಸೋಮವಾರ ಕಾರ್ಕಳದಲ್ಲಿ ನಡೆದ ವಾತ್ಸಲ್ಯ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಜಿ. ಜಗದೀಶ್ ಸಮ್ಮುಖದಲ್ಲಿ ವಿತರಿಸಲಾಯಿತು.

ಚಿತ್ರಕೂಟ ಫುಡ್ಸ್ ಇದರ ಪೋಷಕ್ ಆಹಾರವು ಔಷಧೀಯ ಗಿಡಮೂಲಿಕೆಗಳಿಂದ ತಯಾರಿಸಿದ್ದು ಮಕ್ಕಳ ಪೋಷಣೆ ಮತ್ತು ಬೆಳವಣಿಗೆಗೆ ಸಹಕರಿಸುವುದರ ಜೊತೆಗೆ ಅವರಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಸಿರಿ ಧಾನ್ಯ, ಕಾಳು ಮೆಣಸು, ಅಶ್ವಗಂಧ, ಮೊಳಕೆ ಬರಿಸಿದ ಕಾಳುಗಳು ಸೇರಿದಂತೆ 35 ಬಗೆಯ ಪದಾರ್ಥಗಳನ್ನು ಚಿತ್ರಕೂಟ ಪೋಷಕ್ ಒಳಗೊಂಡಿದೆ.

ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಆಶಾ ಕಾರ್ಯಕರ್ತೆಯರ ಮೂಲಕ ಚಿತ್ರಕೂಟ ಶಿಶುಪೋಷಕ್ ಮತ್ತು ಚಿತ್ರಕೂಟ ಪೋಷಕ್ ಕೂಡ ನೀಡಲಾಗಿದೆ ಎಂದು ಚಿತ್ರಕೂಟ ಸಂಸ್ಥೆಯ ಮುಖ್ಯಸ್ಥರಾಗಿರುವ ಡಾ. ರಾಜೇಶ್ ಬಾಯರಿಯವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶಿಕ್ಷಕರು ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು: ಡಾ.ಅಶೋಕ ಕಾಮತ್

ಉಡುಪಿ, ಸೆ.20: ರೋಟರಿ ಉಡುಪಿ ಮತ್ತು ಇನ್ನರ್ ವೀಲ್ ಕ್ಲಬ್ ಅವರ...

ತಿರುಪತಿ ಪ್ರಸಾದಕ್ಕೆ ಅಪಚಾರ- ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಸೆ.20: ಆರಾಧ್ಯ ಮೂರ್ತಿ ಶ್ರೀ ತಿರುಪತಿ ತಿಮ್ಮಪ್ಪನ ಪವಿತ್ರ ಪ್ರಸಾದಕ್ಕೆ...

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...
error: Content is protected !!