ಬನ್ನಂಜೆಯ ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿನ ಸಿಬ್ಬಂದಿಗಳಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ನಗರಸಭಾ ಸದಸ್ಯ ಮತ್ತು ಪ್ರತಿಪಕ್ಷ ನಾಯಕರಾದ ರಮೇಶ್ ಕಾಂಚನ್ ಹಾಗೂ ಉದ್ಯಮಿಗಳಾದ ಮುರಳಿ ಶೆಟ್ಟಿ, ಗಣೇಶ್ ದೇವಾಡಿಗ, ಗಣೇಶ್ ನೆರ್ಗಿ, ರಮೇಶ್ ಪಾಲ್, ರಿಕಿತ್ ಇವರ ಸಹಕಾರದೊಂದಿಗೆ ಫೇಸ್ ಶೀಲ್ಡ್, ಮಾಸ್ಕ್ ಮತ್ತು ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.
ರಮೇಶ್ ಕಾಂಚನ್ ಅವರು ಮಾತನಾಡಿ, ಇಂಥಹ ಸಂಕಷ್ಟದ ಕಾಲದಲ್ಲಿ ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುವ ಆಶಾ ಕಾರ್ಯಕರ್ತರ ಸೇವೆ ಶ್ಲಾಘನೀಯ. ತಮ್ಮ ಜೀವದ ಹಂಗು ತೊರೆದು ಕೊರೋನಾ ಮಹಾಮಾರಿಯ ಬಗ್ಗೆ ಜನಜಾಗೃತಿ ಮೂಡಿಸುವ ಜತೆಗೆ ಸೋಂಕಿತರಲ್ಲಿ ಧೈರ್ಯ ತುಂಬುತ್ತಿರುವ ತಮ್ಮ ಸೇವೆ ಅಭಿನಂದನೀಯ. ಇಂಥಹ ಕಷ್ಟದ ಸಮಯದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತರಿಗೆ ಕ್ಲಪ್ತ ಸಮಯದಲ್ಲಿ ವೇತನವನ್ನು ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಕೇಂದ್ರದ ವೈದ್ಯಾಧಿಕಾರಿ ಡಾ ಹೇಮಂತ್, ಲ್ಯಾಬ್ ಟೆಕ್ನಿಷಿಯನ್ ರಮೇಶ್ ನಾಯ್ಕ್, ಕಛೇರಿ ಸಹಾಯಕಿ ಪ್ರಮೀಳಾ, ರಘುರಾಮ್ ಭಟ್, ಸಂಜಯ್ ಆಚಾರ್ಯ, ಆಶಾ ಸುಗಮಕಾರರಾದ ಹಿಮಾ ವರ್ಗಿಸ್, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.