ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆಯ ನಿಯೋಗವು ವತಿಯಿಂದ ಜಿಲ್ಲಾಧಿಕಾರಿ ಜಿ. ಜಗದೀಶ್ ರವರನ್ನು ಭೇಟಿ ಮಾಡಿ ಲಾಕ್ ಡೌನ್ ಸಂದರ್ಭದಲ್ಲಿ ದೈವ ಚಾಕ್ರಿ ವರ್ಗದವರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸರ್ಕಾರದ ಮೂರು ಬಾರಿಯ ಕೋವಿಡ್ ಪ್ಯಾಕೇಜಿನಲ್ಲಿ ಸರ್ಕಾರ ಕರಾವಳಿಯ ದೈವಾರಾಧನೆ ಕ್ಷೇತ್ರದಲ್ಲಿ ದುಡಿಯುವವರಿಗೆ ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ಯಾವುದೇ ಪರಿಹಾರ ಒದಗಿಸಿಲ್ಲ. ಎರಡು ವರ್ಷಗಳಿಂದ ಸರಿಯಾಗಿ ಯಾವುದೇ ವಾರ್ಷಿಕ ನೇಮೋತ್ಸವಗಳು ಸೇರಿದಂತೆ ಇತರ ಕಾರ್ಯಗಳು ನಡೆಯಲಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ದೈವ ಚಾಕ್ರಿ ವರ್ಗದವರಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಇವರಿಗೆ ಜೀವನ ನಡೆಸುವುದು ಸವಾಲಾಗಿ ಪರಿಣಮಿಸಿದೆ. ಲಾಕ್ ಡೌನ್ ನಂತರ 200 ಜನರನ್ನು ಒಳಗೊಂಡಂತೆ ಸೀಮಿತ ಅವಧಿಗೆ ಸರ್ಕಾರದ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸಿ ದೈವಾರಾಧನೆಗೆ ಅನುಮತಿ ನೀಡಬೇಕಾಗಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷರಾದ ರವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ್ ಪೂಜಾರಿ,ಜೊತೆ ಕಾರ್ಯದರ್ಶಿ ರವೀಶ್ ಕಾಮತ್,ಗೌರವ ಹಿತೈಷಿಗಳಾದ ನವೀನ್ ಉಪಸ್ಥಿತರಿದ್ದರು.