ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪ.ಜಾತಿ/ ಪ. ಪಂಗಡದ ಕುಟುಂಬದ ಸದಸ್ಯರಿಗೆ ವಿತರಿಸಲಾದ ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡ್ ಪ್ರಸಕ್ತ ಸಾಲಿನಲ್ಲಿ ನವೀಕರಿಸಲಾಗುತ್ತಿದ್ದು, ಕಾರ್ಡ್ ಹೊಂದಿರುವ ಕುಟುಂಬದ ಯಾವುದಾದರೂ ಸದಸ್ಯರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಪ್ರತಿಯೊಂದಿಗೆ ಜುಲೈ 15 ರ ಒಳಗೆ ನಗರಸಭಾ ಕಚೇರಿಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿ, ಕಾರ್ಡ್ಗಳನ್ನು ನವೀಕರಿಸಿಕೊಳ್ಳಬೇಕು. ದಾಖಲೆ ಸಲ್ಲಿಸಿದವರ ಕಾರ್ಡ್ಗಳನ್ನು ಮಾತ್ರ ನವೀಕರಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡ್ ನವೀಕರಣ- ಜುಲೈ 15 ಕೊನೆಯ ದಿನ
ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡ್ ನವೀಕರಣ- ಜುಲೈ 15 ಕೊನೆಯ ದಿನ
Date: