ನವದೆಹಲಿ: ಬಂಗಾಳಕೊಲ್ಲಿಯಲ್ಲಿ ರಚನೆಯಾಗಲಿರುವ ‘ಸಿತ್ರಾಂಗ್’ ಚಂಡಮಾರುತ, ದೇಶದ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಈ ಅವಧಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಒಡಿಶಾದತ್ತ ಸೈಕ್ಲೋನ್ ಚಲಿಸಿ ಬಂಗಾಳಕ್ಕೆ ಅಪ್ಪಳಿಸಲಿದೆ. ಕರ್ನಾಟದಲ್ಲಿಯೂ ಮಳೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಬಂಗಾಳಕೊಲ್ಲಿಯಲ್ಲಿ ರಚನೆಯಾಗಲಿರುವ ಸಿತ್ರಾಂಗ್, ಅ.23ರಿಂದ 25 ರ ಮಧ್ಯೆ ಕರಾವಳಿ ರಾಜ್ಯಗಳಿಗೆ ಅಪ್ಪಳಿಸಲಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಮುಂದಿನ ನಾಲ್ಕು ದಿನ ಭಾರೀ ಮಳೆಯಾಗಲಿದೆ.
ಮೂರು ವರ್ಷಗಳ ನಂತರ: ಬಂಗಾಳಕೊಲ್ಲಿಯಲ್ಲಿ 2018 ಅಕ್ಟೋಬರ್ ನಲ್ಲಿ ತಿತ್ಲಿ ಚಂಡಮಾರುತ ಉಂಟಾಗಿದ್ದು ಭಾರಿ ಸದ್ದು ಮಾಡಿದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಮೂರು ವರ್ಷದ ನಂತರ ‘ಸಿತ್ರಾಂಗ್’ ಚಂಡಮಾರುತ ಅಕ್ಟೋಬರ್ ೨೫ ರಂದು ಅಪ್ಪಳಿಸಲಿದೆ.