ಮುಂಬಯಿ: ರಾಜ್ಯದಲ್ಲಿ ಶಿವಸೇನೆಯ ಸಿಎಂ ಇದ್ದರೂ ಸಿಎಂ ನಿವಾಸಕ್ಕೆ ಭೇಟಿ ನೀಡುವ ಅವಕಾಶವನ್ನು ಪಕ್ಷದ ಶಾಸಕರು ಬಳಸಿಕೊಳ್ಳಲಿಲ್ಲ. ಸಿಎಂ ಅವರನ್ನು ಭೇಟಿಯಾಗಬೇಕೋ ಬೇಡವೋ ಎಂದು ಅವರ ಸುತ್ತಲಿನ ಜನ ನಿರ್ಧರಿಸುತ್ತಿದ್ದರು. ನಮಗೆ ಅವಮಾನ ಮಾಡಲಾಗಿದೆ ಎಂದು ಶಿವಸೇನೆ ಶಾಸಕರು ಪತ್ರದಲ್ಲಿ ಬರೆದಿದ್ದಾರೆ. ಈ ಪತ್ರವನ್ನು ಶಿವಸೇನೆ ಬಂಡಾಯ ಶಾಸಕ ಏಕನಾಥ್ ಶಿಂಧೆ ಹಂಚಿಕೊಂಡಿದ್ದಾರೆ.
ಪತ್ರದಲ್ಲಿ ಏನಿದೆ?
ಸಿಎಂ ಯಾವತ್ತೂ ಸೆಕ್ರೆಟರಿಯೇಟ್‌ನಲ್ಲಿ ಇರುತ್ತಿರಲಿಲ್ಲ ಬದಲಾಗಿ ಮಾತೋಶ್ರೀ (ಠಾಕ್ರೆ ನಿವಾಸ) ದಲ್ಲಿ ಇರುತ್ತಿದ್ದರು. ನಾವು ಸಿಎಂ ಸುತ್ತಲಿನವರಿಗೆ ಕರೆ ಮಾಡುತ್ತಿದ್ದೆವು, ಆದರೆ ಅವರು ನಮ್ಮ ಕರೆಗೆ ಕಿವಿಗೊಡಲೇ ಇಲ್ಲ. ಈ ಎಲ್ಲ ಸಂಗತಿಗಳಿಂದ ಬೇಸತ್ತು ಏಕನಾಥ್ ಶಿಂಧೆ ಅವರನ್ನು ಈ ಕ್ರಮಕ್ಕೆ ಮನವೊಲಿಸಿದೆವು. ನಮಗೆ ಸಿಎಂ ಅವರನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೂ ನಮ್ಮ ’ನಿಜವಾದ ವಿರೋಧ ಪಕ್ಷದ’ ಜನರು– ಕಾಂಗ್ರೆಸ್ ಮತ್ತು ಎನ್‌ಸಿಪಿ ಅವರನ್ನು ಭೇಟಿ ಮಾಡಲು ಅವಕಾಶಗಳನ್ನು ಪಡೆಯುತ್ತಿದ್ದರು ಮತ್ತು ಅವರ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅನುದಾನ ಸಹ ನೀಡಲಾಗಿದೆ.
ಹಿಂದುತ್ವ ಮತ್ತು ರಾಮ ಮಂದಿರವು ಶಿವಸೇನೆ ಪಕ್ಷಕ್ಕೆ ನಿರ್ಣಾಯಕ ವಿಷಯವಾಗಿರುವಾಗ, ಪಕ್ಷವು ನಮ್ಮನ್ನು ಅಯೋಧ್ಯೆಗೆ ಭೇಟಿ ನೀಡದಂತೆ ಏಕೆ ತಡೆಯಿತು? ಆದಿತ್ಯ ಠಾಕ್ರೆ ಅಯೋಧ್ಯೆ ಭೇಟಿ ವೇಳೆ ಶಾಸಕರನ್ನು ಕರೆಸಿ ಅಯೋಧ್ಯೆಗೆ ಹೋಗದಂತೆ ತಡೆದರು.
ಮತ್ತಷ್ಟು ಶಾಸಕರು ಗುವಾಹಟಿಯತ್ತ?
ಶಿವಸೇನೆ ಶಾಸಕರು ಬೀಡು ಬಿಟ್ಟಿರುವ ಅಸ್ಸಾಂನಲ್ಲಿರುವ ರೇಡಿಸನ್ ಹೊಟೇಲ್ ಗೆ ಇಂದು ಮತ್ತಷ್ಟು ಬಂಡಾಯ ಶಾಸಕರು ಸೇರಿಕೊಂಡಿದ್ದಾರೆ.