Home ಸುದ್ಧಿಗಳು ರಾಷ್ಟ್ರೀಯ ‘ಮತ್ತೊಮ್ಮೆ ಮೋದಿ’ ಎಂದ ಸಮೀಕ್ಷೆ

‘ಮತ್ತೊಮ್ಮೆ ಮೋದಿ’ ಎಂದ ಸಮೀಕ್ಷೆ

244
0

ನವದೆಹಲಿ, ಫೆ.9: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸತತ ಮೂರನೇ ಅವಧಿಗೆ ಜನಾದೇಶವನ್ನು ಗೆಲ್ಲುತ್ತದೆ. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ 304 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಮಾಧ್ಯಮ ಸಂಸ್ಥೆ ನಡೆಸಿದ ಸಮೀಕ್ಷೆಯೊಂದು ತಿಳಿಸಿದೆ. ಇಂಡಿಯಾ ಟುಡೇ ನಡೆಸಿದ ಮೂಡ್ ಆಫ್ ದಿ ನೇಷನ್ ಅಭಿಪ್ರಾಯ ಸಂಗ್ರಹದಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎಗೆ 335 ಸ್ಥಾನಗಳು ಸಿಗಲಿದೆ ಎಂದು ಭವಿಷ್ಯ ನುಡಿದಿದೆ. ಸರಳ ಬಹುಮತಕ್ಕೆ 272 ಸ್ಥಾನಗಳು ಗೆಲ್ಲಬೇಕಿದೆ. ಏತನ್ಮಧ್ಯೆ, 543 ಸದಸ್ಯ ಬಲದ ಲೋಕಸಭೆಯಲ್ಲಿ ಕಾಂಗ್ರೆಸ್ ಅನ್ನು ಒಳಗೊಂಡಿರುವ ವಿರೋಧ ಪಕ್ಷವಾದ ಐ.ಎನ್.ಡಿ.ಐ.ಎ 166 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಕಾಂಗ್ರೆಸ್‌ಗೆ 71 ಸ್ಥಾನಗಳು ಸಿಗಲಿದೆ ಎಂದು ಸಮೀಕ್ಷೆ ಹೇಳಿದೆ. ೨೦೧೯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 52 ಸ್ಥಾನಗಳಲ್ಲಿ ಜಯಶಾಲಿಯಾಗಿತ್ತು ಮತ್ತು 2014 ರಲ್ಲಿ 44 ಸ್ಥಾನಗಳನ್ನು ಗೆದ್ದುಕೊಂಡಿತ್ತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.