Thursday, January 23, 2025
Thursday, January 23, 2025

ಕಾಂಗ್ರೆಸ್ ಸಂಸದನ ಸಂಸ್ಥೆಗಳ ಮೇಲೆ ಐಟಿ ದಾಳಿ; 300 ಕೋಟಿ ರೂ. ವಶ

ಕಾಂಗ್ರೆಸ್ ಸಂಸದನ ಸಂಸ್ಥೆಗಳ ಮೇಲೆ ಐಟಿ ದಾಳಿ; 300 ಕೋಟಿ ರೂ. ವಶ

Date:

ನವದೆಹಲಿ, ಡಿ.10: ದೇಶದ ಇತಿಹಾಸದಲ್ಲಿ ಮೊದಲು ಎಂಬಂತೆ ಅಕ್ರಮ ನಗದು ಇರುವ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಒಡೆತನದ ಒಡಿಶಾ ಮತ್ತು ರಾಂಚಿಯಲ್ಲಿರುವ ವಿವಿಧೆಡೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಇಲ್ಲಿಯವರೆಗೆ 300 ಕೋಟಿ ರೂ.ಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದ್ದು, ಇನ್ನಷ್ಟು ನಗದು ವಶಪಡಿಸಿಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ. ಚಿನ್ನಾಭರಣ ಸೇರಿದಂತೆ ಒಟ್ಟು ಮೊತ್ತ 500 ಕೋಟಿ ರೂ ದಾಟುವ ಸಾಧ್ಯತೆಯಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ನೋಟು ಎಣಿಸಲು 40 ಯಂತ್ರ; ಹೆಚ್ಚುವರಿ ಸಿಬ್ಬಂದಿ: ದಾಳಿ ನಡೆಸಿದ ಸ್ಥಳಗಳಲ್ಲಿ ಪತ್ತೆಯಾದ ನೋಟುಗಳನ್ನು ಎಣಿಸಲು ಆದಾಯ ತೆರಿಗೆ ಇಲಾಖೆಯು 40ಕ್ಕೂ ಅಧಿಕ ದೊಡ್ಡ ಮತ್ತು ಸಣ್ಣ ಯಂತ್ರಗಳನ್ನು ಬಳಸುತ್ತಿದೆ. ಎಣಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಲಾಖೆ ಮತ್ತು ಬ್ಯಾಂಕ್​ಗಳ ಹೆಚ್ಚಿನ ಉದ್ಯೋಗಿಗಳನ್ನು ನಿಯೋಜಿಸಲಾಗಿದೆ.

ಕಾಂಗ್ರೆಸ್ ವಿರುದ್ಧ ಪ್ರಧಾನಿ ವಾಗ್ದಾಳಿ: ದಾಳಿಯ ಕುರಿತು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ನಾಗರಿಕರು ದಾಳಿಯ ಸಂದರ್ಭ ಸಿಕ್ಕಿದ ನೋಟುಗಳ ರಾಶಿಯನ್ನು ನೋಡಬೇಕು ನಂತರ ವಿರೋಧ ಪಕ್ಷದ ನಾಯಕರ ಭಾಷಣಗಳನ್ನು ಕೇಳಬೇಕು. ಸಾರ್ವಜನಿಕರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನು ಹಿಂದಿರುಗಿಸಬೇಕು, ಇದು ಮೋದಿಯ ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ಪಾತ್ರ ಇಲ್ಲ: ಜಾರ್ಖಂಡ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಕಂಪನಿಯಿಂದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಂತರವನ್ನು ಕಾಪಾಡಿಕೊಂಡಿದೆ. ಧೀರಜ್ ಸಾಹು ಅವರ ವ್ಯವಹಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ಅಕ್ರಮ ಆಸ್ತಿಯ ಬಗ್ಗೆ ಅವರೇ ಉತ್ತರ ನೀಡಬೇಕು, ನಮಗೆ ಸಂಬಂಧವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ...

ರಾಜ್ಯದಲ್ಲಿ ಗೋವುಗಳ ಮೇಲೆ ಆಕ್ರಮಣ- ಜ.25 ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ

ಉಡುಪಿ, ಜ.22: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ಹಿಂಸೆಗಳು ನಡೆಯುತ್ತಿದ್ದು ಗೋವುಗಳ...

ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

ಮಣಿಪಾಲ, ಜ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ...

ಮಲ್ಪೆ: ಸಿರಿಧಾನ್ಯ ರೋಡ್ ಶೋ

ಉಡುಪಿ, ಜ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ...
error: Content is protected !!