ನವದೆಹಲಿ: ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಮತ್ತು ಪ್ರಧಾನ ಕಛೇರಿ, ಸಂಯೋಜಿತ ರಕ್ಷಣಾ ಸಿಬ್ಬಂದಿ ಶುಕ್ರವಾರ ಜಂಟಿಯಾಗಿ ಹೈಪರ್ಸಾನಿಕ್ ವಾಹನ ಪ್ರಯೋಗ ನಡೆಯಿತು.
ಶಬ್ದದ ವೇಗಕ್ಕಿಂತ ಕನಿಷ್ಠ ಐದು ಪಟ್ಟು ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಹೈಪರ್ಸಾನಿಕ್ ಹೊಂದಿದೆ. ಕಳೆದೆರಡು ವರ್ಷಗಳಿಂದ ಹೈಪರ್‌ಸಾನಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಭಾರತದಲ್ಲಿ ವ್ಯಾಪಕ ಕೆಲಸಗಳಾಗುತ್ತಿವೆ. ಹೈಪರ್ಸಾನಿಕ್ ಕ್ಷಿಪಣಿಗಳನ್ನು ಸ್ವದೇಶಿಯಾಗಿ ತಯಾರಿಸುವಲ್ಲಿ ಭಾರತ ಪ್ರಯತ್ನಿಸುತ್ತಿದೆ.