ನವದೆಹಲಿ, ಮಾ. 5: ಡಿ.ಆರ್.ಡಿ.ಒ ವಿನ್ಯಾಸಗೊಳಿಸಿದ ದೇಶೀಯ ಸೀಕರ್ ಮತ್ತು ಬೂಸ್ಟರ್ ನೊಂದಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ಹಡಗಿನ ಮೂಲಕ ಭಾರತೀಯ ನೌಕಾಪಡೆ ಅರಬ್ಬಿ ಸಮುದ್ರದಲ್ಲಿ ಯಶಸ್ವಿ ಪರೀಕ್ಷೆ ನಡೆಸಿದೆ.
ಕೋಲ್ಕತಾ ದರ್ಜೆಯ ಯುದ್ಧನೌಕೆಯಿಂದ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ. ಬ್ರಹ್ಮೋಸ್ ಏರೋಸ್ಪೇಸ್ ಕ್ಷಿಪಣಿಯಲ್ಲಿ ದೇಶೀಯ ವಸ್ತುಗಳನ್ನು ಹೆಚ್ಚಿಸಲು ನಿರಂತರವಾಗಿ ಪ್ರಯತ್ನಗಳು ಆಗುತ್ತಿದೆ.