ಮುಂಬೈ: ವಿಶ್ವದಾದ್ಯಂತ ಕೋವಿಡ್ ಹಾವಳಿ ಬಹುತೇಕ ತಗ್ಗಿದೆ. ಆದರೆ ಇಂಗ್ಲೆಂಡಿನಲ್ಲಿ ಭಯ ಹುಟ್ಟಿಸಿದ ಹೊಸ ಕೊವಿಡ್-19 ರೂಪಾಂತರಿಯ ಮೊದಲ ಪ್ರಕರಣ ಭಾರತದಲ್ಲೂ ಪತ್ತೆಯಾಗಿದೆ. ಒಮಿಕ್ರಾನ್‌ನ BA.2 ಉಪ-ತಳಿ XE ಎಂದು ಕರೆಯಲ್ಪಡುವ ಕೊರೊನಾ ವೈರಸ್‌ನ ಹೊಸ ರೂಪಾಂತರದ ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆಯಾಗಿದೆ. ಹಿಂದಿನ ತಳಿಗಳಿಗೆ ಹೋಲಿಸಿದರೆ ಈ ರೂಪಾಂತರಿ ಅತಿ ಹೆಚ್ಚು ಅಪಾಯಕಾರಿ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ಆರಂಭಿಕ ಅಧ್ಯಯನಗಳ ಪ್ರಕಾರ, XE ರೂಪಾಂತರವು BA.2 ಗಿಂತ 9.8 ಪ್ರತಿಶತದಷ್ಟು ಬೆಳವಣಿಗೆಯನ್ನು ಹೊಂದಿದೆ. ಪತ್ತೆಹಚ್ಚುವಿಕೆಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯದಿಂದಾಗಿ ಹೊಸ ರೂಪಾಂತರಕ್ಕೆ ಸ್ಟೆಲ್ತ್ ರೂಪಾಂತರ ಎಂದೂ ಕರೆಯುತ್ತಾರೆ.