ಚಕ್ರಧರಪುರ್ (ಜಾರ್ಖಂಡ್), ಜು.30: ಹೌರಾ-ಮುಂಬೈ ರೈಲಿನ 18 ಬೋಗಿಗಳು ಹಳಿ ತಪ್ಪಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು 20 ಮಂದಿಗೆ ಗಾಯಗೊಂಡ ದುರಂತದ ಘಟನೆ ಜಾರ್ಖಂಡ್ನ ಚಕ್ರಧರಪುರ ವಿಭಾಗದ ಪೊಟೊಬೆಡಾ ಗ್ರಾಮದ ಬಳಿ ಸಂಭವಿಸಿದೆ. ಹೌರಾದಿಂದ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ಗೆ ರೈಲು ಪ್ರಯಾಣ ಬೆಳೆಸಿತ್ತು. ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಘಾತದ ಸ್ಥಳಕ್ಕೆ ಪರಿಹಾರ ರೈಲು ತಲುಪಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ರೈಲ್ವೇಯು ಟಾಟಾನಗರ (06572290324), ಚಕ್ರಧರಪುರ (06587 238072), ರೂರ್ಕೆಲಾ (06612501072, 06612500244), ರಾಂಚಿ (0651278711) ಮತ್ತು ಹೌರಾ (93233873203373203356) ಗೆ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ.
ಏನಾಗಿತ್ತು?: ಸೋಮವಾರ ರಾತ್ರಿ ಹೌರಾದಿಂದ ಪ್ರಯಾಣ ಬೆಳೆಸಿದ ಹೌರಾ-ಮುಂಬೈ ರೈಲು, ಮಂಗಳವಾರ ಬೆಳಿಗ್ಗೆ 3.45 ಗಂಟೆಗೆ ಕೆಲವೇ ಕ್ಷಣಗಳ ಹಿಂದೆ ಹಳಿ ತಪ್ಪಿದ ಗೂಡ್ಸ್ ರೈಲಿಗೆ ಢಿಕ್ಕಿಯಾದ ಪರಿಣಾಮ ಹೌರಾ-ಮುಂಬೈ ರೈಲು ಹಳಿ ತಪ್ಪಿದೆ.