ನವದೆಹಲಿ, ಆ.29: ಪ್ರಚಾರದ ವಿಡಿಯೋದಲ್ಲಿ ಮಗುವನ್ನು ಬಳಸಿಕೊಂಡು ಹರಿಯಾಣದ ಬಿಜೆಪಿಯು ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವುದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ತಕ್ಷಣದ ತಿದ್ದುಪಡಿ ಕ್ರಮಕ್ಕಾಗಿ ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಸಂಜೆ 6 ಗಂಟೆಯೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಬಿಜೆಪಿ ಮುಖ್ಯಸ್ಥ ಮೋಹನ್ ಲಾಲ್ ಬಾಡೋಲಿ ಅವರಿಗೆ ಸೂಚಿಸಲಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಯಾವುದೇ ಮಗುವನ್ನು ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಬಾರದು.
ಪ್ರಚಾರದ ವಿಡಿಯೋದಲ್ಲಿ ಮಕ್ಕಳ ಬಳಕೆ- ಬಿಜೆಪಿಗೆ ಚುನಾವಣಾ ಆಯೋಗದ ನೋಟಿಸ್
ಪ್ರಚಾರದ ವಿಡಿಯೋದಲ್ಲಿ ಮಕ್ಕಳ ಬಳಕೆ- ಬಿಜೆಪಿಗೆ ಚುನಾವಣಾ ಆಯೋಗದ ನೋಟಿಸ್
Date: