ಲಕ್ನೋ: ದೇಶದ ಹಿರಿಯ ಬಿಜೆಪಿ ಕಾರ್ಯಕರ್ತ ಭುಲಾಯಿ ಭಾಯ್ ರನ್ನು ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರ ಪ್ರದೇಶ ಭವನದಲ್ಲಿ ಭೇಟಿಯಾದರು.
107 ವಯಸ್ಸಿನಲ್ಲಿ ಅತ್ಯಂತ ಕ್ರಿಯಾಶೀಲರಾಗಿರುವ ಭುಲಾಯಿ ಭಾಯ್ ಅವರಿಗೆ ಇನ್ನಷ್ಟು ಕಾಲ ಸೇವೆ ಮಾಡಲು ಆರೋಗ್ಯವನ್ನು ದೇವರು ಕರುಣಿಸಲಿ ಎಂದು ನವರಾತ್ರಿಯ ಪರ್ವಕಾಲದಲ್ಲಿ ಪ್ರಾರ್ಥಿಸಿದ್ದೇನೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಭುಲಾಯಿ ಭಾಯ್ ಉತ್ತರ ಪ್ರದೇಶದಲ್ಲಿ ಜನಸಂಘದ ಕಾಲದಲ್ಲಿ ಶಾಸಕರಾಗಿದ್ದರು.