Home ಸುದ್ಧಿಗಳು ರಾಷ್ಟ್ರೀಯ ಭಯೋತ್ಪಾದಕ ಗುಂಪುಗಳು ಬಳಸುವ ‘ಮೊಬೈಲ್ ಮೆಸೆಂಜರ್ ಆಪ್‌ʼಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ

ಭಯೋತ್ಪಾದಕ ಗುಂಪುಗಳು ಬಳಸುವ ‘ಮೊಬೈಲ್ ಮೆಸೆಂಜರ್ ಆಪ್‌ʼಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ

248
0

ನವದೆಹಲಿ, ಮೇ 1: ದೇಶದ ಭದ್ರತೆಗೆ ಮಾರಕವಾಗಿರುವ ಮೊಬೈಲ್ ಮೆಸೆಂಜರ್ ಆಪ್‌ ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಭದ್ರತೆಯ ಕಾರಣಕ್ಕಾಗಿ ಕೇಂದ್ರ ಸರ್ಕಾರ 14 ಮೊಬೈಲ್ ಮೆಸೆಂಜರ್ ಆಪ್‌ಗಳಾದ ಕ್ರಿಪ್ವೈಸರ್, ಎನಿಗ್ಮಾ, ಸೇಪೆಸ್ವಿಸ್, ವಿಕ್ರ್ಮಿ, ಮೀಡಿಯಾಫೈರ್, ಬ್ರಿಯರ್, ಬಿಚ್ಯಾಟ್, ನ್ಯಾಂಡ್ ಬಾಕ್ಸ್, ಕೋನಿಯಾನ್, ಐಎಂಓ, ಎಲಿಮೆಂಟ್, ಸೆಕೆಂಡ್ ಲೈನ್, ಜಾಂಗಿ, ಥ್ರೀಮಾ ಇವುಗಳನ್ನು ನಿರ್ಬಂಧಿಸಿದೆ.

ಪಾಕಿಸ್ತಾನದಿಂದ ಸಂದೇಶವನ್ನು ಹರಡಲು ಮತ್ತು ಸಂದೇಶಗಳನ್ನು ಸ್ವೀಕರಿಸಲು ಭಯೋತ್ಪಾದಕರು ಈ ಮೊಬೈಲ್ ಮೆಸೆಂಜರ್ ಅಪ್ಲಿಕೇಶನ್‌ಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ. ಈ ಮೆಸೆಂಜರ್ ಅಪ್ಲಿಕೇಶನ್‌ಗಳನ್ನು ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ಗುಂಪುಗಳು ಬಳಸುತ್ತಿವೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.