Tuesday, November 26, 2024
Tuesday, November 26, 2024

ರಾಷ್ಟ್ರಪತಿ ಚುನಾವಣೆ- ಅಭ್ಯರ್ಥಿ ಘೋಷಣೆ ಮಾಡಿದ ಎನ್.ಡಿ.ಎ

ರಾಷ್ಟ್ರಪತಿ ಚುನಾವಣೆ- ಅಭ್ಯರ್ಥಿ ಘೋಷಣೆ ಮಾಡಿದ ಎನ್.ಡಿ.ಎ

Date:

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿಯಾಗಿ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಹೆಸರನ್ನು ಬಿಜೆಪಿ ನೇತೃತ್ವದ ಎನ್.ಡಿ.ಎ ಘೋಷಿಸಿದೆ. ತನ್ಮೂಲಕ ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರು ಕಣಕ್ಕೆ ಇಳಿಯಲಿದ್ದಾರೆ.

ಚುನಾವಣೆಯಲ್ಲಿ ಗೆದ್ದರೆ ರಾಷ್ಟ್ರಪತಿಯಾಗಿ ಆಯ್ಕೆಯಾದ ಭಾರತದ ಮೊದಲ ಬುಡಕಟ್ಟು ಮಹಿಳೆಯಾಗಲಿದ್ದಾರೆ. ದ್ರೌಪದಿ ಮುರ್ಮು 2015 ರಿಂದ 2021 ರವರೆಗೆ ಜಾರ್ಖಂಡ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ಬಿಜೆಡಿ-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ನವೀನ್ ಪಟ್ನಾಯಕ್ ಸಂಪುಟದಲ್ಲಿ ಸಚಿವರಾಗಿದ್ದ ಇವರು, ಒರಿಸ್ಸಾದಿಂದ ಎರಡು ಬಾರಿ ಶಾಸಕರಾಗಿದ್ದರು. 2013 ರಲ್ಲಿ ಬಿಜೆಪಿ ಎಸ್.ಟಿ ಮೋರ್ಚಾದ ರಾಷ್ಟ್ರ‍ೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.

ಜೂನ್ 20, 1958 ರಲ್ಲಿ ಒರಿಸ್ಸಾದಲ್ಲಿ ಜನಿಸಿದ ಇವರು, ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಬಿಎ ಪದವಿ ಶಿಕ್ಷಣ ಪಡೆದ ಇವರು ಎರಡು ದಶಕಗಳ ಕಾಲ ಸಮಾಜಸೇವೆಯಲ್ಲಿ ಅದರಲ್ಲೂ ಬುಡಕಟ್ಟು ಕಲ್ಯಾಣಕ್ಕಾಗಿ ಸೇವೆ ಸಲ್ಲಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹಾಲಾಡಿ: ಕಾದಂಬರಿ ಲೋಕಾರ್ಪಣೆ

ಕುಂದಾಪುರ, ನ.26: ಹಾಲಾಡಿಯ ಬೆಳಾರ್‌ಮಕ್ಕಿ ಮಂಜುನಾಥ ಕಾಮತ್‌ರವರು ಬರೆದ 'ಕಣ್ತೆರೆದ ಕನಸು'...

ಕಲಾವಿದರನ್ನು ಗುರುತಿಸುವ ಕಾಯಕ ಶ್ಲಾಘನೀಯ: ಉದಯಕುಮಾರ್ ಶೆಟ್ಟಿ

ಕೋಟ, ನ.26: ಸಂಘಟನೆಗಳಿಂದ ಕಲಾರಾಧನೆ ಹಾಗೂ ಕಲಾವಿದರ ಗುರುತಿಸುವ ಕಾಯಕ ಅತ್ಯಂತ...

ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

ಉಡುಪಿ, ನ.26: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ...

ದೈಹಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.25: ಪ್ರತಿಯೊಬ್ಬರ ದೈಹಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ. ಸದಾ...
error: Content is protected !!