Home ಸುದ್ಧಿಗಳು ರಾಷ್ಟ್ರೀಯ ಅರುಣಾಚಲ ಪ್ರದೇಶ: ಸೇನಾ ವಿಮಾನ ಪತನ

ಅರುಣಾಚಲ ಪ್ರದೇಶ: ಸೇನಾ ವಿಮಾನ ಪತನ

266
0

ನವದೆಹಲಿ, ಮಾ. 16: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಮಂಡಲ ಹಿಲ್ಸ್ ಪ್ರದೇಶದ ಬಳಿ ಪತನಗೊಂಡ ಘಟನೆ ಗುರುವಾರ ನಡೆದಿದೆ. ವಿಮಾನದಲ್ಲಿದ್ದ ಪೈಲಟ್ ಮತ್ತು ಸಹ ಪೈಲಟ್ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಇಬ್ಬರೂ ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸೇನಾ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಲೆ.ಕ.ವಿವಿಬಿ ರೆಡ್ಡಿ ಮತ್ತು ಮೇ.ಜಯಂತ್ ಎ ಹುತಾತ್ಮರಾಗಿದ್ದಾರೆ.

ಘಟನೆಯ ಹಿನ್ನಲೆ: ಸೆಂಗೆ ಹಳ್ಳಿಯಿಂದ ಮಿಸ್ಸಾಮರಿಗೆ ಹಾರಾಟ ಆರಂಭಿಸಿದ ಸೇನಾ ಹೆಲಿಕಾಪ್ಟರ್ ಕೆಲವೇ ಹೊತ್ತಿನಲ್ಲಿ ಸಂಪರ್ಕ ಕಳೆದುಕೊಂಡಿತು. ಮಧ್ಯಾಹ್ನ ಸುಮಾರು 12.30 ವೇಳೆಗೆ ಮಂಡಲ ಹಿಲ್ಸ್ ಪ್ರದೇಶದ ಜನರು ಹೆಲಿಕಾಪ್ಟರ್ ಅಪಘಾತವಾಗಿರುವುದನ್ನು ಅರುಣಾಚಲ ಪ್ರದೇಶ ಪೊಲೀಸರ ಗಮನಕ್ಕೆ ತಂದರು. ಘಟನೆ ನಡೆದ ಪ್ರದೇಶದಲ್ಲಿ ನೆಟ್ ವರ್ಕ್ ಇರಲಿಲ್ಲ ಮತ್ತು ದಟ್ಟವಾದ ಮಂಜು ಆವರಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಸೇನೆ ಆದೇಶಿಸಿದೆ ಎಂದು ರಕ್ಷಣಾ ವಕ್ತಾರ ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.