ತಿರುವನಂತಪುರ, ಮಾ.9: ಕೇರಳ ರಾಜ್ಯದ ತಿರುವನಂತಪುರಂನ ವರ್ಕಲಾದಲ್ಲಿ ಶನಿವಾರ ತೇಲುವ ಸೇತುವೆಯೊಂದರ ಹ್ಯಾಂಡ್ ರೈಲಿಂಗ್ಸ್ ಕುಸಿದು 15 ಮಂದಿ ಗಾಯಗೊಂಡಿದ್ದಾರೆ. ತಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬಲವಾದ ಅಲೆಗಳ ಹೊಡೆತಕ್ಕೆ ತೇಲುವ ಸೇತುವೆಯ ಹ್ಯಾಂಡ್ರೈಲ್ ಕುಸಿದು ಜನರು ಸಮುದ್ರಕ್ಕೆ ಬಿದ್ದಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಕೇರಳ: ತೇಲುವ ಸೇತುವೆಯ ತಡೆಗೋಡೆ ಕುಸಿದು 15 ಮಂದಿಗೆ ಗಾಯ

ಕೇರಳ: ತೇಲುವ ಸೇತುವೆಯ ತಡೆಗೋಡೆ ಕುಸಿದು 15 ಮಂದಿಗೆ ಗಾಯ
Date: