ಬೆಂಗಳೂರು, ಫೆ.24: ಜನ ಜಾನುವಾರುಗಳಿಗೆ ನೀರು, ಮೇವಿಗೆ ಆಹಾಕಾರ ಉಂಟಾಗಿ ನಾಡಿನೆಲ್ಲೆಡೆ ತೀವ್ರ ಬರ ಎದುರಿಸುತ್ತಿರುವ ಹೊತ್ತಲ್ಲಿ ತಮ್ಮ ಮನೆಯ ಶೃಂಗಾರಕ್ಕೆ ಬರೊಬ್ಬರಿ 9 ಕೋಟಿ ದುಂದು ವೆಚ್ಚ ಮಾಡುವ ಜರೂರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಏಕೆ ಇತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ. ಹೀನಾಯ ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ. ಸಂಕಷ್ಟದ ಕಾಲದ ಪರಿಹಾರ ಕಾರ್ಯವೂ ಸ್ಥಗಿತಗೊಂಡಿದೆ. ಇಂಥಹ ಪರಿಸ್ಥಿತಿಯಲ್ಲೂ ಮನೆ ಶೃಂಗಾರದ ಆದ್ಯತೆ ಪಡೆದು 9 ಕೋಟಿ ಖರ್ಚು ಮಾಡಿದರೆ ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಗಾದೆ ಮಾತು ನೆನಪಿಗೆ ಬರುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಬರಗಾಲದ ಹೊತ್ತಲ್ಲಿ ತಮ್ಮ ಮನೆಯ ಶೃಂಗಾರಕ್ಕೆ ರೂ. 9 ಕೋಟಿ ವೆಚ್ಚ ಮಾಡುವ ಅಗತ್ಯತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಏಕೆ ಇತ್ತು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಬರಗಾಲದ ಹೊತ್ತಲ್ಲಿ ತಮ್ಮ ಮನೆಯ ಶೃಂಗಾರಕ್ಕೆ ರೂ. 9 ಕೋಟಿ ವೆಚ್ಚ ಮಾಡುವ ಅಗತ್ಯತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಏಕೆ ಇತ್ತು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
Date: