Friday, September 20, 2024
Friday, September 20, 2024

ಬದುಕು ಕೃತಜ್ಞತೆಯೇ ಹೊರತು ಹಕ್ಕಲ್ಲ: ಎಸ್. ಎನ್. ಸೇತುರಾಮ್

ಬದುಕು ಕೃತಜ್ಞತೆಯೇ ಹೊರತು ಹಕ್ಕಲ್ಲ: ಎಸ್. ಎನ್. ಸೇತುರಾಮ್

Date:

ವಿದ್ಯಾಗಿರಿ, ಏ. 25: ಬದುಕು ಕೃತಜ್ಞತೆಯೇ ಹೊರತು ಹಕ್ಕಲ್ಲ ಎಂದು ಸಾಹಿತಿ, ಚಿತ್ರಕಥೆಗಾರ, ನಿರ್ದೇಶಕ ಎಸ್. ಎನ್. ಸೇತುರಾಮ್ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ (ಎಐಇಟಿ)ನಲ್ಲಿ ‘ಚಿಂತನ- ಮಂಥನ’ ರೀಡರ್ಸ್ ಕ್ಲಬ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ರಾಷ್ಟ್ರೀಯತೆ ಮತ್ತು ಸಾಮಾಜಿಕ ಪ್ರಜ್ಞೆ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಹಳೆಯ ಮತ್ತು ಇಂದಿನ ತಲೆಮಾರುಗಳ ಆಲೋಚನೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಹಳೆ ತಲೆಮಾರಿನವರು ಜೀವನವನ್ನು ಜವಾಬ್ದಾರಿ ಹಾಗೂ ಕೃತಜ್ಞತೆಯಿಂದ ಕಂಡರೆ, ಹೊಸ ತಲೆಮಾರಿನವರು ಬದುಕನ್ನು ಹಕ್ಕು ಎಂದು ಭಾವಿಸಿದ್ದಾರೆ ಎಂದರು. ಜನಸಂಖ್ಯೆಯೇ ದೇಶದ ಸಂಪತ್ತು. ಯುವಜನತೆ ಸಮಾಜಕ್ಕೆ ನೀಡುವ ಕೊಡುಗೆಯೇ ಅವರ ಸಾಧನೆ. ಈ ದೇಶದಲ್ಲಿರುವಷ್ಟು ಪ್ರಜ್ಞೆ, ಭಾಷೆ, ಧರ್ಮ, ಹಬ್ಬಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಹೀಗಾಗಿ, ಭಾರತೀಯರಿಗೆ ಹಿಂಜರಿಕೆ ಬೇಡ ಎಂದರು.

ದೇಶದಲ್ಲಿ ಸಂಪತ್ತು ಹೇರಳವಾಗಿದ್ದ ಕಾರಣ, ಭಾರತವು ಬೇರೆ ದೇಶದ ಮೇಲೆ ದಂಡೆತ್ತಿ ಹೋಗಿರಲಿಲ್ಲ. ಆದರೆ, ಇತರ ದೇಶಗಳು ಆಕ್ರಮಣಗಳ ಮೂಲಕ ಭಾರತೀಯರನ್ನು ನೆಮ್ಮದಿಯಾಗಿ ಬದುಕಲು ಬಿಡಲಿಲ್ಲ. ದೇಶದಲ್ಲಿರುವ ಗುಲಾಮಗಿರಿಯ ಮನಸ್ಥಿತಿಯನ್ನು ಹೋಗಲಾಡಿಸಬೇಕಾಗಿದೆ ಎಂದರು. ನಾವು ಬೇರೆ ದೇಶದ ಆವಿಷ್ಕಾರವನ್ನು ನಂಬುತ್ತೇವೆ. ನಮ್ಮ ದೇಶದ ಆವಿಷ್ಕಾರವನ್ನು ನಂಬುವುದಿಲ್ಲ. ಸುಖ- ಸಂತೋಷ ಆಂತರ್ಯದಿಂದ ಬರಬೇಕೇ ಹೊರತು, ಬಾಹ್ಯದಿಂದಲ್ಲ. ರಾಷ್ಟ್ರೀಯತೆ ಜೊತೆ ಸಾಮಾಜಿಕ ಪ್ರಜ್ಞೆಯಿದ್ದರೆ ದೇಶವನ್ನು ಅದ್ಭುತವಾಗಿ ಕಟ್ಟಬಹುದು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ದೇಶಪ್ರೇಮ ಎಂದರೆ ಕೇವಲ ಬಾವುಟ ಹಾಗೂ ಜೈಕಾರಕ್ಕೆ ಸೀಮಿತವಲ್ಲ. ಯಾವುದೇ ಇಸಂಗಳಿಗೆ ಬಲಿಪಶು ಆಗದೇ, ವಿಷಯದ ಆಳಜ್ಞಾನ ಹೊಂದಬೇಕು ಎಂದು ಸಲಹೆ ನೀಡಿದರು. ಕಾರ‍್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್, ‘ಚಿಂತನ- ಮಂಥನ’ ರೀಡರ್ಸ್ ಕ್ಲಬ್‌ನ ಸಂಯೋಜಕರಾದ ಶಶಿಕುಮಾರ್ ಹಾಗೂ ಶ್ವೇತಾ ಇದ್ದರು. ಉಪನ್ಯಾಸಕ ಮನೋಜ್ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಿಯಾ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!