Monday, January 20, 2025
Monday, January 20, 2025

ಯಶೋಕಿರಣ ಕಟ್ಟಡ ಉದ್ಘಾಟನೆ

ಯಶೋಕಿರಣ ಕಟ್ಟಡ ಉದ್ಘಾಟನೆ

Date:

ಮೂಡುಬಿದಿರೆ, ಏ. 16: ಜೈನ ಧರ್ಮದಲ್ಲಿ ಸಂಯಮಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಬದುಕಿನಲ್ಲಿ ತಾಳ್ಮೆ ಬಹುಮುಖ್ಯ. ಇಲ್ಲವಾದರೆ ವ್ಯಕ್ತಿಯ ಜೀವನ ಅಸ್ತವ್ಯಸ್ತವಾಗುತ್ತದೆ ಹಾಗಾಗಿ ಪ್ರತಿಯೊಬ್ಬರು ಸಂಯಮ ರೂಢಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ಹೆಗ್ಗಡೆ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕೃಷಿ ಸಿರಿ ವೇದಿಕೆಯಲ್ಲಿ ನಡೆದ ಭಗವಾನ್ ಮಹಾವೀರ ಜಯಂತಿ ಆಚರಣೆಯಲ್ಲಿ ಸಂದೇಶ ನೀಡುತ್ತಾ ಮಾತನಾಡಿದ ಅವರು ಸಂಯವೇ ಯಶಸ್ಸಿನ ಮೂಲ. ಸಂಯಮದ ಹೊರತಾಗಿ ಯಾವುದೇ ಸಾಧನೆ ಸಾಧ್ಯವಿಲ್ಲ ಎಂದರು.

ಬದಲಾಗುತ್ತಿರುವ ಸಮಾಜದಲ್ಲಿ ಸರಳತೆಯನ್ನು ದೌರ್ಬಲ್ಯವೆಂದು ವ್ಯಾಖ್ಯಾನಿಸಲಾಗುತ್ತಿದೆ ಇದು ಸಲ್ಲದು. ಮನಸ್ಸಿನ ಶುದ್ಧಿ ಅಗತ್ಯ. ಬಂಧನಕ್ಕೂ ಮೋಕ್ಷಕ್ಕೂ ಮನಸೇ ಕಾರಣ. ತನ್ನೊಳಗಿನ ಕಾಮನೆ ಗೆದ್ದವನೇ ನಿಜವಾಗಿಯೂ ಭಗವಂತ ಎಂದರು. ಮಹಾವೀರರು ಅಪರಿಗ್ರಹಕ್ಕೆ ಮಹತ್ವ ಕೊಟ್ಟವರು. ಮಿತವ್ಯಯ ಅನುಸರಿಸಿದ ಅವರ ಜೀವನ ಶೈಲಿ ಅನುಕರಣೆ ಅಗತ್ಯ. ಹೆಚ್ಚು ಸಂಪಾದನೆ, ಹೆಚ್ಚು ಭೋಗಿಸುದಷ್ಟೇ ಜೀವನವಾಗದೇ ಸಾಮರಸ್ಯದಿಂದ ಪ್ರೀತಿ ಹಂಚಿ ಬಾಳಬೇಕು. ನಾವು ಎಲ್ಲಿಂದ ಬಂದಿದ್ದೇವೆ? ನಾವು ಎಲ್ಲಿಗೆ ಹೋಗಬೇಕು? ಬದುಕಿನ ತತ್ವ ತಿಳಿದುಕೊಳ್ಳುವುದೇ ನಿಜವಾದ ಆಧ್ಯಾತ್ಮ. ಈ ಮುಖೇನ ಭಗವಂತನನ್ನು ಸಂಧಿಸಬಹುದಾಗಿದೆ ಎಂದರು.

ಆಶೀರ್ವಚನ ನೀಡಿ ಮಾತನಾಡಿದ ಮೂಡಬಿದಿರೆಯ ಜೈನ ಮಠದ ಸ್ವಾಮೀಜಿ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮನುಷ್ಯನಲ್ಲಿ ಆತ್ಮ ಚಿಂತನೆ ಇರಬೇಕು. ಒಳಿತನ್ನು ಸದಾ ಪ್ರಶಂಸಿವ ಗುಣ ಆತ ರೂಢಿಸಿಕೊಳ್ಳಬೇಕು. ಇದರಿಂದಾಗಿ ಒತ್ತಡ ರಹಿತ ಬದುಕು ಸಾಗಿಸಲು ಸಾಧ್ಯ ಎಂದರು. ಪರರ ಹಿತ,ಸಹನೆ, ಸಹಾಯ ಪ್ರವೃತಿಯಿಂದ ಮನಸ್ಸು ನಿಷ್ಕಲ್ಮಶ ಹೊಂದುತ್ತದೆ. ಸದ್ಗುಣ ಚಂಚಲ ಮನಸ್ಸನ್ನು ಸ್ಥಿರತೆ ಕಡೆಗೆ ಕೊಂಡೊಯ್ಯುತ್ತವೆ ಅದುವೇ ಆಧ್ಯಾತ್ಮ ಎಂದರು. ದಿವಂಗತ ಡಾ. ಬಿ ಯಶೋವರ್ಮರವರ ಸ್ಮರಣಾರ್ಥವಾಗಿ ನಿರ್ಮಿಸಿದ ಕಟ್ಟಡ ಯಶೋಕಿರಣದ ಉದ್ಘಾಟನಾ ಕಾರ‍್ಯಕ್ರಮವನ್ನು ಇದೇ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆಯವರು ನೆರೆವೇರಿಸಿದರು. ಯಶೋವರ್ಮರ ಸ್ಮರಣಾರ್ಥವಾಗಿ ಡಾ.ಎಂ ಮೋಹನ್ ಆಳ್ವರು ಕಟ್ಟಡಕ್ಕೆ ಯಶೋಕಿರಣ ಎಂದು ಹೆಸರಿಟ್ಟಿದ್ದಾರೆ, ಇದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಆಳ್ವರ ವ್ಯವಹಾರಿಕ ಜ್ಞಾನದ ಹೊರತಾಗಿ ಅವರ ವ್ಯಕ್ತಿತ್ವದಿಂದ ಜನಸಾಮಾನ್ಯರು ಕಲಿಯಬೇಕಾದದ್ದು ಸಾಕಷ್ಟು ಇವೆ. ಅವರ ಕಲಿಕೆ ಮತ್ತು ಕಲ್ಪನೆಯ ಸಮತೋಲನದಿಂದ ಇಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಈ ಪರಿ ಬೆಳೆದು ನಿಂತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಜಗತ್ತು ಅನುಸರಿಸಬೇಕಾದದ್ದು ಒಂದೇ ಧರ್ಮ ಅದು ಮಾನವ ಧರ್ಮ. ಜೀವನ ಸರಳ ಮಾಡಲು ದಾರ್ಶನಿಕರು ಅನೇಕ ಧರ್ಮ ಹುಟ್ಟುಹಾಕಿದರು. ಇಂದು ದೇಶದಲ್ಲಿ ಹಲವು ಭಾಷೆ, ಹಲವು ಧರ್ಮ, ಮತ, ಜಾತಿಗಳಿವೆ. ಪ್ರತಿ ಧರ್ಮಕ್ಕೂ ಗೌರವ ಕೊಡುತ್ತಾ ಸೌಹಾರ್ದತೆಯಿಂದ ಬಾಳಬೇಕು ಈ ಮುಖೇನ ಲೋಕಕ್ಕೆ ಶಾಂತಿಯ ಸಂದೇಶ ಸಾರಬೇಕು ಎಂದರು.

ಪಾಶ್ವನಾಥ ಇಂದ್ರರವರು ಪೂಜಾ ವಿಧಿವಿಧಾನವನ್ನು ನೆರೆವೇರಿಸಿದರು. ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಬಳಗದವರಿಂದ ಜಿನ ಗೀತೆ ಗಾಯನ- ಸಂಗೀತ ಮಾಧರ‍್ಯ ಜಿನಗಾನ ವಿಶಾರಧೆ ನಡೆಯಿತು. ಶಾಸ್ತ್ರೋಕ್ತವಾಗಿ ಜರುಗಿದ ಭಗವಾನ್ ಶ್ರೀ ಮಹಾವೀರ ಜಯಂತೆ ಆಚರಣೆಯು ತೋರಣ ಮಹೂರ್ತದೊಂದಿಗೆ ಪ್ರಾರಂಭವಾಗಿ ಜಿನ ಮೂರ್ತಿಗೆ ಅಭಿಷೇಕ ಹಾಗೂ ಅಷ್ಟವಿಧಾರ್ಚನೆ ಪೂಜಾ ವಿಧಾನದ ನಂತರ ಸಹಭೋಜನದೊಂದಿಗೆ ಮುಕ್ತಾಯವಾಯಿತು. ಡಾ. ಬಿ ಯಶೋವರ್ಮರವರ ಪತ್ನಿ ಸೋನಿ ವರ್ಮಾ, ಚೌಟರ ಅರಮನೆಯ ಕುಲದೀಪ್ ಎಂ., ಭಾರತೀಯ ಜೈನ ಮಿಲನ ವಲಯ ೮ ಅಧ್ಯಕ್ಷ ಯುವರಾಜ ಭಂಡಾರಿ, ಮೂಡುಬಿದಿರೆಯ ಸುದೇಶ ಕುಮಾರ ಪಟ್ಟಣಶೆಟ್ಟಿ, ಉದ್ಯಮಿ ಕೆ ಶ್ರೀಪತಿ ಭಟ್, ಬಂಗ್ವಾಡಿ ಅರಮನೆಯ ಯಶೋಧರ ಬಲ್ಲಾಳ್, ಮೋಕ್ತೇಸರ ದಿನೇಶ ಕುಮಾರ ಆಲಡ್ಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಅಂಡಾರು ಗುಣಪಾಲ ಹೆಗ್ಡೆ ಸ್ವಾಗತಿಸಿ, ವಕೀಲೆ ಶ್ವೇತಾ ಜೈನ್ ಕಾರ‍್ಯಕ್ರಮ ನಿರ್ವಹಿಸಿ, ವಂದಿಸಿದರು. ಆಳ್ವಾಸ್ ವಿದ್ಯಾರ್ಥಿಗಳಾದ ಪ್ರಮಯಿ ಜೈನ್, ಖ್ಯಾತಿ ಜೈನ್ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!