Tuesday, January 21, 2025
Tuesday, January 21, 2025

ಶಿಕ್ಷಣ ಹಕ್ಕು ಕಾಯಿದೆ -2009: ಸಮಾಲೋಚನಾ ಸಭೆ

ಶಿಕ್ಷಣ ಹಕ್ಕು ಕಾಯಿದೆ -2009: ಸಮಾಲೋಚನಾ ಸಭೆ

Date:

ಕೊಡಗು, ಜ. 26: ಪಡಿ ಸಂಸ್ಥೆ ಮಂಗಳೂರು ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೊಡಗು ಜಿಲ್ಲೆ ಇವರ ಸಹಯೋಗದೊಂದಿಗೆ ಶಿಕ್ಷಣ ಹಕ್ಕು ಕಾಯಿದೆ 2009 ರ ಕುರಿತು ಸಮಾಲೋಚನಾ ಸಭೆಯನ್ನು ಕಲ್ಲುಗುಂಡಿ ಸಮನ್ವಯ ಸಹಕಾರಿ ಸಭಾಭವನದಲ್ಲಿ ನಡೆಯಿತು.

ಸಂಪಾಜೆ ಗ್ರಾಮ ಪಂಚಾಯತ್‌ ಅದ್ಯಕ್ಷರಾದ ನಿರ್ಮಲಾ ಭರತ್ ಕಾರ್ಯಕ್ರಮ ಉದ್ಘಾಟಿಸಿ ಪಡಿ ಸಂಸ್ಥೆಯ ಹಸ್ತಕ್ಷೇಪದಿಂದ ಸರಕಾರಿ ಶಾಲಾ ಎಸ್.ಡಿ.ಎಮ್.ಸಿ ಸಬಲೀಕರಣಗೊಂಡು ಶಾಲೆಗಳಲ್ಲಿ ಅಭಿವೃದ್ಧಿ ಕಾರ್ಯ ಮತ್ತು ಮೇಲ್ವಿಚಾರಣೆಯಲ್ಲಿ ತೊಡಗಿದೆ. ಮುಂದೆಯೂ ಸರಕಾರಿ ಶಾಲೆಗಳ ಸಂಬಂಧವನ್ನು ಮುಂದುವರಿಸಿದಲ್ಲಿ ಸರಕಾರಿ ಶಾಲೆಗಳು ಎಲ್ಲಾ ರೀತಿಯಲ್ಲೂ ಮಾದರಿಯಾಗಿ ಬೆಳೆಯಲು ಸಾಧ್ಯ ಎಂದರು.

ಪಡಿ ಸಂಸ್ಥೆ ತರಬೇತು ಸಂಯೋಜಕ ವಿವೇಕ ಕುಂದಾಪುರ ತರಬೇತು ಇವರು ಮಾತನಾಡಿ, ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಶಾಲಾ ಅಭಿವೃದ್ಧಿಯಾಗಬೇಕಾದರೆ ಸಮುದಾಯ, ಎಸ್.ಡಿ.ಎಂ.ಸಿ, ಪೋಷಕರು, ಶಿಕ್ಷಕರು ಮತ್ತು ಸ್ಥಳೀಯ ಸರಕಾರಗಳ ಪಾತ್ರ ತುಂಬಾ ಪ್ರಮುಖವಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಭಾಗೀಯ ಸುಗಮಗಾರರಾದ ರಾಜೇಶ್ವರಿ ಮೂರು ವರ್ಷದ ಕಾರ್ಯಚಟುವಟಿಕೆಗಳ ವರದಿಯನ್ನು ಸಭೆಯ ಮುಂದೆ ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘ ಇದರ ಅಧ್ಯಕ್ಷರಾದ ಸೋಮಶೇಖರ ಕ್ಯೊಂನಾಜೆ ಮಾತನಾಡಿ, ಸರಕಾರಿ ಶಾಲೆಗಳಿಗೆ ಇಲಾಖೆಯ ಸಹಕಾರದ ಕೊರತೆ ಕಾಣುತ್ತಿದೆ. ಸರಕಾರ ಇಲಾಖೆಗಳು ಎಸ್.ಡಿ.ಎಮ್.ಸಿ ಜೊತೆ ಕೈಜೋಡಿಸಿದಲ್ಲಿ ಸರಕಾರಿ ಶಾಲೆಗಳು ಉತ್ತಮ ಬೆಳವಣಿಗೆ ಕಾಣಲು ಸಾದ್ಯ ಎಂದರು.

ಸಂಪಾಜೆ ಕ್ಲಸ್ಟರ್‌ನ ಎಲ್ಲಾ ಶಾಲಾ ಎಸ್.ಡಿ.ಎಮ್.ಸಿ ಗೆ ಅಭಿನಂದನಾ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ತರಬೇತುದಾರರಾಗಿ ಕಾರ್ಯನಿರ್ವಹಿಸಿದ ನಾರಾಯಣ ಕಿಲಂಗೋಡಿ, ಕಾಂತಿ ಬಿ.ಎಸ್ ಇವರುಗಳನ್ನು ಅಭಿನಂದನಾ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರು ಪಡಿಯ ಒಳಗೊಳ್ಳುವಿಕೆಯಿಂದ ಶಾಲೆಗಳಲ್ಲಿ, ಎಸ್.ಡಿ.ಎಮ್.ಸಿ ಸಮೀತಿಗಳಲ್ಲಿ ಆದ ಬದಲಾವಣೆ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಶಾಲಾ ಮುಖ್ಯಶಿಕ್ಷಕರು ಪಡಿ ಕಾರ್ಯಗಳ ಬಗ್ಗೆ ಶ್ಲಾಘಿಸಿ ಮುಂದೆಯೂ ಸಹಕಾರ ನೀಡುವಂತೆ ವಿನಂತಿಸಿದರು.

ಅದ್ಯಕ್ಷತೆ ವಹಿಸಿದ ಸಂಪಾಜೆ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ರೇಖಾ ಮಾತನಾಡಿ, ಪಡಿ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ತುಂಬ ಅನುಭವವನ್ನು ಪಡೆದಿದೆ, ಸಮುದಾಯವನ್ನು ಶಾಲೆಯೆಡೆಗೆ ತರುವ ಈ ಸಂಸ್ಥೆಯ ಕಾರ್ಯವು ಶ್ಲಾಘನೀಯ. ಪಡಿಯ ಯೋಜನೆಯನ್ನು ಅರ್ಥೈಸಲು ಸಮಯಗಳೇ ಬೇಗಾಗುತ್ತದೆ. 2020-23ರ ಯೋಜನೆ ಮುಕ್ತಾಯಗೊಂಡರೂ ಪಡಿಯ ನಿರಂತರ ಸಹಕಾರವನ್ನು ಬಯಸುತ್ತಿದ್ದೇವೆ. ಮುಂದೆ ಬೇರೆ ಕ್ಲಸ್ಟರ್‌ ಆಯ್ಕೆ ಮಾಡುತ್ತಿದ್ದರೆ ಹತ್ತಿರದ ಪೆರಾಜೆ ಕ್ಲಸ್ಟರ್‌ ಆಯ್ಕೆ ಮಾಡುವಂತೆ ಮನವಿ ಮಾಡಿದರು. ಪಡಿಯ ಯೋಜನೆ ಇನ್ನು ಹೆಚ್ಚಿನ ಯಶಸ್ಸನ್ನು ಕಾಣಲಿ ಎಂದದರು. ನಾರಾಯಣ ಕಿಲಂಗೋಡಿ ವಂದಿಸಿದರು. ಕಾಂತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಂಪೆನಿ ಸೆಕ್ರೇಟರಿ ಪ್ರವೇಶ ಪರೀಕ್ಷೆ: ಕಾರ್ಕಳ ಜ್ಞಾನಸುಧಾದ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ, ಜ.21: ದಿನಾಂಕ 11.01.2025 ರಂದು ಇನ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್...

ಸೇವಾ ದಿನಾಚರಣೆ

ಗಂಗೊಳ್ಳಿ, ಜ.21: ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರೀತಿ, ಶಿಸ್ತು ಇರಬೇಕು....

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...
error: Content is protected !!