ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರರಿಗೆ ಸರ್ಕಾರ ಸಿಹಿ ಸುದ್ಧಿ ನೀಡಿದೆ. ರೈತರಿಗೆ ರಾಜ್ಯ ಸರ್ಕಾರ ಎಥೆನಾಲ್ ಮೇಲಿನ ಲಾಭಾಂಶವನ್ನು ನೀಡಲು ನಿರ್ಧರಿಸಿದೆ. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಸಭೆ ವಿಕಾಸಸೌಧದಲ್ಲಿ ನಡೆದಿದ್ದು, ಎಫ್.ಆರ್.ಪಿ ದರ ಪಾವತಿ ಬಳಿಕ ಪ್ರತಿ ಟನ್ ಗೆ ಹೆಚ್ಚುವರಿಯಾಗಿ ರೂ. 50 ರಂತೆ ಒಟ್ಟು 204.47 ಕೋಟಿ ಬಿಡುಗಡೆ ಮಾಡಿದೆ. ಈ ಬಗ್ಗೆ ತಕ್ಷಣ ಆದೇಶ ಹೊರಡಿಸುವಂತೆ ಕಬ್ಬು ಅಭಿವೃದ್ದಿ ಆಯುಕ್ತರಿಗೆ ಸಚಿವರು ಸೂಚನೆ ನೀಡಿದ್ದಾರೆ.
ಕಬ್ಬು ಬೆಳೆಗಾರರಿಗೆ ‘ಸಿಹಿ’ ಸುದ್ಧಿ
ಕಬ್ಬು ಬೆಳೆಗಾರರಿಗೆ ‘ಸಿಹಿ’ ಸುದ್ಧಿ
Date: