ಮಂಡ್ಯ: ಅಂಗಡಿಯ ಮುಂದೆ ನಾಮಫಲಕ ಅಳವಡಿಸುವಾಗ ವಿದ್ಯುತ್ ತಂತಿ ತಗಲಿ ಇಬ್ಬರು ಛಾಯಾಗ್ರಾಹಕರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ವಿವೇಕ್ ಹಾಗೂ ಮಧುಸೂಧನ್ ಮೃತಪಟ್ಟವರು. ಇಬ್ಬರು ಸ್ಟುಡಿಯೋ ಇಟ್ಟುಕೊಂಡಿದ್ದರು. ಸ್ಟುಡಿಯೋ ನಾಮಫಲಕ ಅಳವಡಿಸುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ. ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಸ್ಪರ್ಶ: ಇಬ್ಬರು ಛಾಯಾಗ್ರಾಹಕರ ದುರ್ಮರಣ
ವಿದ್ಯುತ್ ಸ್ಪರ್ಶ: ಇಬ್ಬರು ಛಾಯಾಗ್ರಾಹಕರ ದುರ್ಮರಣ
Date: