Tuesday, January 21, 2025
Tuesday, January 21, 2025

17-18 ನೇ ಶತಮಾನದ ಶಾಸನ ಪತ್ತೆ

17-18 ನೇ ಶತಮಾನದ ಶಾಸನ ಪತ್ತೆ

Date:

ಸಿರಗುಪ್ಪ, ಅ. 17: ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಸಮೀಪದ ದೇವಿನಗರ ಪ್ರದೇಶದ ‌ಹೊರವಲಯದಲ್ಲಿನ ಶಾಸನವನ್ನು ಹನುಮಂತಮ್ಮ ದಿ. ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿಯಾದ ಹೆಚ್. ಕಾಡಸಿದ್ದ ಮತ್ತು ಗುರುಮಹರ್ಷಿ ಕಾಲೇಜು ಸಿರಗುಪ್ಪ ಇಲ್ಲಿನ ಅಂತಿಮ ಬಿ.ಎ ವಿದ್ಯಾರ್ಥಿಯಾದ ಎಂ. ಹೊನ್ನುರವಲ್ಲಿ ಪತ್ತೆ ಮಾಡಿರುತ್ತಾರೆ. ಈ ಶಾಸನವನ್ನು ಓದಲು ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ಅಂತಿಮ ಬಿ.ಎ ವಿದ್ಯಾರ್ಥಿಗಳಾದ ದಿಶಾಂತ್ ದೇವಾಡಿಗ ಮತ್ತು ವಿಶಾಲ್ ರೈ. ಕೆ ಅವರು ಸಹಕಾರ ನೀಡಿರುತ್ತಾರೆ.

ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನದ ಲಿಪಿಯು ಸುಮಾರು 17-18 ನೇ ಶತಮಾನಕ್ಕೆ ಸೇರಿದ್ದು, ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ‌ ಹಾಗೂ ಇದರ‌ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ರೇಖಾ‌ಚಿತ್ರವನ್ನು ಕಾಣಬಹುದು. 5 ಸಾಲುಗಳನ್ನು‌ ಹೊಂದಿರುವ ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು, ಟೆಂಕಲಕೋಟೆಯ ವಿರಕ್ತ ಹೊಸ ಮಟಕೆ ಮರಿಯ ಮಾಂತ್ತ (ತೂಂತ್ತ) ಸ್ವಾಮಿಗಳು ಮೋಕ್ಷದ ಸ್ವಸ್ತಿ ಎಂಬ ಉಲ್ಲೇಖವನ್ನು ‌ನೀಡುತ್ತದೆ.

ಈ ಶಾಸನದ ಕುರಿತು ತೆಕ್ಕಲಕೋಟೆಯ ಕಂಬಳಿ‌ ಮಠದ ಸ್ವಾಮಿಗಳಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳಲ್ಲಿ ಕೇಳಿಕೊಂಡಾಗ, ಹಿಂದೊಮ್ಮೆ ಒಬ್ಬ ಸ್ವಾಮಿಗಳು ಜನನ-ಮರಣದ ಚಕ್ರಗಳಿಂದ ಸಕಲ ಜೀವರಾಶಿಗಳಿಗೆ ಒಳ್ಳೆಯದಾಗಬೇಕೆಂದು, ತಪಸ್ಸಿಗೆ ‌ಕುಳಿತು ಮೋಕ್ಷವನ್ನು ಪಡೆದಿದ್ದರು ಎಂದು ಹೇಳುತ್ತಾರೆ‌. ಅಧ್ಯಯನ‌ ದೃಷ್ಟಿಯಿಂದ ಗಮನಿಸುವುದಾದರೆ, ಶಾಸನ ಉಲ್ಲೇಖಿತ ಟೆಂಕಲಕೋಟೆಯು ಪ್ರಸ್ತುತ ತೆಕ್ಕಲಕೋಟೆ ಎಂದು ಕರೆಯಲ್ಪಡುವ ಸ್ಥಳವಾಗಿರಬಹುದು ಹಾಗೆಯೇ ವಿರಕ್ತ‌ ಹೊಸ ಮಠದ ತೂಂತ್ತ (ಮಾಂತ್ತ) ಸ್ವಾಮಿಗಳ ಮೋಕ್ಷದ ವಿಷಯವನ್ನು ಈ ಶಾಸನವು ತಿಳಿಸುತ್ತದೆ ಎಂದು ಸಂಶೋಧನಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!