Home ಸುದ್ಧಿಗಳು ರಾಜ್ಯ ಮಾತೋಶ್ರೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ: ನೂತನ ಕಟ್ಟಡ ಉದ್ಘಾಟನೆ

ಮಾತೋಶ್ರೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ: ನೂತನ ಕಟ್ಟಡ ಉದ್ಘಾಟನೆ

412
0

ಕುಮಟಾ, ಮೇ 23: ವಿನಯ್ ನಾಯಕ್ ಅಧ್ಯಕ್ಷತೆಯ ಮಾತೋಶ್ರೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ ಇದರ ಪ್ರಧಾನ ಕಛೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಿನಿ ವಿಧಾನಸೌಧದ ಎದುರಿನ ಕಟ್ಟಡದಲ್ಲಿ ನಡೆಯಿತು.

ಸಹಕಾರಿ ಸಂಘಗಳ ಜಂಟಿ ನಿಬಂಧಕರಾದ ಪ್ರವೀಣ್ ಬಿ ನಾಯಕ ಉದ್ಘಾಟನೆ ನೆರವೇರಿಸಿದರು. ಉ.ಕ. ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸಾಯಿನಾಥ ಕೇಶವ ಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಐ.ಆರ್.ಎಸ್. ಎ.ಸಿ ಪ್ರಮೋದ್ ನಾಯಕ್, ಕೆ.ಡಿ.ಸಿ.ಸಿ ಬ್ಯಾಂಕ್ ಲಿ. ಉಪಾಧ್ಯಕ್ಷರಾದ ಮೋಹನದಾಸ ನಾಯಕ, ಮದನ್ ನಾಯಕ್, ಪ್ರದೀಪ್ ಡಿ ನಾಯಕ, ಮಾತೋಶ್ರೀ ಸಹಕಾರಿಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.