ವಿದ್ಯಾಗಿರಿ, ಮೇ. 8: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಶಾಲೆಯ 6 ವಿದ್ಯಾರ್ಥಿಗಳು 620ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಣಾಮ್ ಶೆಟ್ಟಿ (623), ಸ್ಪಂದನಾ ಎಂ. ಎಂ.(622), ಸಂಜನಾ ಎಸ್. ಎಚ್. (621), ಶಾರದಾ ಎಸ್.ಕೆ. (621), ವರ್ಷಾ ಬಿ.ಎಚ್. (620), ಮಂಜುಳಾ ಎಸ್.ಜೆ. (620) ಅಧಿಕ ಅಂಕ ಪಡೆದಿದ್ದಾರೆ ಎಂದರು. 64 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. 102 ವಿದ್ಯಾರ್ಥಿಗಳು ಶೇ. 95ಕ್ಕೂ ಅಧಿಕ, 176 ವಿದ್ಯಾರ್ಥಿಗಳು ಶೇ. 90ಕ್ಕೂ ಅಧಿಕ, 294 ವಿದ್ಯಾರ್ಥಿಗಳು ಶೇ 80 ಕ್ಕೂ ಅಧಿಕ ಅಂಕ ಪಡೆದಿದ್ದಾರೆ ಎಂದರು.
ಓರ್ವ ವಿದ್ಯಾರ್ಥಿ ಐದು ವಿಷಯಗಳಲ್ಲಿ ಶೇ. 100 ಪಡೆದಿದ್ದು, 4 ವಿದ್ಯಾರ್ಥಿಗಳು ನಾಲ್ಕು ವಿಷಯಗಳಲ್ಲಿ ಶೇ. 100 ಅಂಕ ಪಡೆದಿದ್ದಾರೆ. 5 ವಿದ್ಯಾರ್ಥಿಗಳು ಮೂರು ವಿಷಯಗಳಲ್ಲಿ, 12 ವಿದ್ಯಾರ್ಥಿಗಳು 2 ವಿಷಯಗಳಲ್ಲಿ ಹಾಗೂ 57 ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಶೇ 100 ಅಂಕ ಪಡೆದಿದ್ದಾರೆ. ಪ್ರಥಮ ಭಾಷೆ ಕನ್ನಡದಲ್ಲಿ 32, ದ್ವಿತೀಯ ಭಾಷೆ ಕನ್ನಡದಲ್ಲಿ 20, ತೃತೀಯ ಭಾಷೆ ಕನ್ನಡದಲ್ಲಿ 17, ಪ್ರಥಮ ಭಾಷೆ ಇಂಗ್ಲಿಷ್‌ನಲ್ಲಿ 2, ದ್ವಿತೀಯ ಭಾಷೆ ಇಂಗ್ಲಿಷ್ 5, ಪ್ರಥಮ ಭಾಷೆ ಸಂಸ್ಕೃತ 15, ತೃತೀಯ ಭಾಷೆ ಹಿಂದಿಯಲ್ಲಿ 10, ತೃತೀಯ ಭಾಷೆ ಸಂಸ್ಕೃತದಲ್ಲಿ 7, ಗಣಿತದಲ್ಲಿ 4, ವಿಜ್ಞಾನ 8, ಸಮಾಜ ವಿಜ್ಞಾನದಲ್ಲಿ 7 ವಿದ್ಯಾರ್ಥಿಗಳು ಶೇ 100 ಅಂಕ ಪಡೆದಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ ವಿವಿಧ ವಿಷಯಗಳ ಒಟ್ಟು 127 ಪತ್ರಿಕೆಗಳಲ್ಲಿ ಶೇ. 100 ಅಂಕಗಳು ಬಂದಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಬಿ., ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯಾ ಟಿ. ಮೂರ್ತಿ, ಆಡಳಿತಾಧಿಕಾರಿ ಪ್ರೀತಂ ಕುಂದರ್ ಹಾಗೂ
ಸಹಾಯ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ ಇದ್ದರು.