Friday, November 22, 2024
Friday, November 22, 2024

‘ಇಂಕ್ ಡಬ್ಬಿ’ ಆನ್ಲೈನ್ ಮಾಧ್ಯಮದಿಂದ ರಾಜ್ಯಮಟ್ಟದ ಲೇಖನ ಸ್ಪರ್ಧೆ

‘ಇಂಕ್ ಡಬ್ಬಿ’ ಆನ್ಲೈನ್ ಮಾಧ್ಯಮದಿಂದ ರಾಜ್ಯಮಟ್ಟದ ಲೇಖನ ಸ್ಪರ್ಧೆ

Date:

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ “ಇಂಕ್ ಡಬ್ಬಿ” ಆನ್ಲೈನ್ ಮಾಧ್ಯಮದ ವತಿಯಿಂದ ರಾಜ್ಯಮಟ್ಟದ ಲೇಖನ ಸ್ಪರ್ಧೆಯ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಬರವಣಿಗೆಯ ಕೌಶಲ್ಯವನ್ನು ಉತ್ತೇಜಿಸುವ ಮತ್ತು ವಿದ್ಯಾರ್ಥಿ-ಯುವಜನರಲ್ಲಿ ಚಿಂತಿಸುವ ಮತ್ತು ಆಲೋಚಿಸುವ ಮನೋಭಾವವನ್ನು ಬೆಳೆಸುವುದಕ್ಕಾಗಿ ಹಾಗೂ ಸಂವೇದನಾಶೀಲ ವಿದ್ಯಾರ್ಥಿ-ಯುವಜನರನ್ನು ಒಳಗೊಂಡ ಸಮಾಜದ ನಿರ್ಮಾಣಕ್ಕಾಗಿ ಬರವಣಿಗೆಯ ಕೌಶಲ್ಯವನ್ನು ಉತ್ತೇಜಿಸುತ್ತಿದ್ದೇವೆ. ಇಂಕ್ ಡಬ್ಬಿ ಆನ್ಲೈನ್ ಮಾಧ್ಯಮವು ರಾಜ್ಯದ ವಿದ್ಯಾರ್ಥಿ-ಯುವಜನರ ಆಲೋಚನೆ, ವಿಚಾರ ಮತ್ತು ಅಭಿಪ್ರಾಯಗಳನ್ನು ಮುಖ್ಯವಾಹಿನಿಗೆ ತಲುಪಿಸುವ ವೇದಿಕೆಯಾಗಿ ಹೊರಹೊಮ್ಮುತ್ತಿದೆ.

ಸಮಾಜದ ಆಗು-ಹೋಗುಗಳ ಬಗ್ಗೆ ಅರಿವಿರುವ ಸಂವೇದನಾಶೀಲ ವಿದ್ಯಾರ್ಥಿ-ಯುವಜನರನ್ನು ಒಳಗೊಂಡ ಸಮಾಜದ ನಿರ್ಮಾಣಕ್ಕಾಗಿ ಬರವಣಿಗೆಯ ಕೌಶಲ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂಕ್ ಡಬ್ಬಿ ಕಾರ್ಯನಿರ್ವಹಿಸುತ್ತಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತವಾಗಿ ರಾಜ್ಯದ ವಿದ್ಯಾರ್ಥಿ-ಯುವಜನರಿಗೆ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಶೀರ್ಷಿಕೆಯ ವಿಷಯದ ಕುರಿತು ಕ್ಯಾಂಪಸ್ ಗಳಲ್ಲಿ ಚರ್ಚೆಗೆ ಒಳಗಾಗಲಿ ಎಂಬ ಆಶಯವಿದೆ.

ವಿಷಯ: ಭಾರತದ ಸಂವಿಧಾನ, ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದಲ್ಲಿ ಪ್ರಸ್ತುತ ವಿದ್ಯಾರ್ಥಿ-ಯುವಜನರ ಕರ್ತವ್ಯ.

ಬಹುಮಾನಗಳ ವಿವರ: ಪ್ರಥಮ ಬಹುಮಾನ: 10,000 ರೂಪಾಯಿ ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನ: 5,000 ರೂಪಾಯಿ ಮತ್ತು ಪ್ರಮಾಣ ಪತ್ರ. ತೃತೀಯ ಬಹುಮಾನ: 3,000 ರೂಪಾಯಿ ಮತ್ತು ಪ್ರಮಾಣ ಪತ್ರ. ಆಯ್ದ ಲೇಖನಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.

ಲೇಖನ ಸ್ವೀಕರಿಸುವ ಕೊನೆಯ ದಿನಾಂಕ: ನವೆಂಬರ್ 25, 2021

ಯಾರು ಬರೆಯಬಹುದು:
ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಮಾತ್ರ. ಲೇಖನವನ್ನು ಈ-ಮೇಲ್ ಮೂಲಕ ಕಳುಹಿಸುವವರು ಈ ವಿಳಾಸಕ್ಕೆ ಕಳುಹಿಸಿ: [email protected]

ಲೇಖನವನ್ನು ಅಂಚೆ ಮೂಲಕ ಕಳುಹಿಸುವವರು ಈ ವಿಳಾಸಕ್ಕೆ ಕಳುಹಿಸಿ: ಜ್ಞಾನ ಕೇಂದ್ರ #7 ಎಸ್.ಆರ್‌.ಕೆ ಉದ್ಯಾನ, ಜಯನಗರ ಪೂರ್ವ, ಬೆಂಗಳೂರು – 560041

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8183871243 /8792908185

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ

ಉಡುಪಿ, ನ.21: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ತಾಲೂಕು ಮಟ್ಟದ...

ಜಿಲ್ಲಾಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ

ಉಡುಪಿ, ನ.21: ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2025 ರ...

ನ.22: ಉಡುಪಿಯಲ್ಲಿ ನೇರ ಸಂದರ್ಶನ

ಉಡುಪಿ, ನ.21: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ನವೆಂಬರ್...

ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ

ಉಡುಪಿ, ನ.21: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಮೈಸೂರಿನ ಭಾರತೀಯ...
error: Content is protected !!