ಬೆಳಗಾವಿ, ಡಿ.11: ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಲು ನಮೂನೆ 50, 53, 57 ರಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗುತ್ತಿದೆ. ನಮೂನೆ 57ರ ಅಡಿ ಸಲ್ಲಿಕೆಯಾದ ಒಟ್ಟು 2.23 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ರಾಜ್ಯಾದ್ಯಂತ ತಿರಸ್ಕೃತಗೊಳಿಸಲಾಗಿದೆ. ಒಂದು ವೇಳೆ ರೈತರು ಇದರಿಂದ ಬಾಧಿತರಾಗಿದ್ದರೆ, ಉಪವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು. ಪ್ರಕರಣಗಳನ್ನು ಮರು ಪರಿಶೀಲಿಸುವಂತೆ ಉಪವಿಭಾಗಾಧಿಕಾರಿಗಳು ಸೂಚಿಸಿದರೆ, ಬಗರ್ ಹುಕುಂ ಸಮಿತಿಗಳಲ್ಲಿ ತಿರಸ್ಕೃತಗೊಂಡ ನಮೂನೆ 57ರ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಪರಿಗಣಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ತಿಳಿಸಿದರು.
ಬಗರ್ ಹುಕುಂ ಅರ್ಜಿ ಪುನರ್ ಪರಿಶೀಲನೆ
ಬಗರ್ ಹುಕುಂ ಅರ್ಜಿ ಪುನರ್ ಪರಿಶೀಲನೆ
Date: