ಬೆಂಗಳೂರು, ಫೆ. 28: ಕಾಂಗ್ರೆಸ್ ನ ಮನಸ್ಥಿತಿ ಮತ್ತೆ ಮತ್ತೆ ಅನಾವರಣಗೊಳ್ಳುತ್ತಿದೆ. ಸಂವಿಧಾನವನ್ನು ರಕ್ಷಿಸುವ ವಿಧಾನಸೌಧದ ಎದುರೇ ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ ಕೂಗುತ್ತಾರೆ ಎಂದರೆ ಕರ್ನಾಟಕದಲ್ಲಿ ಪರಿಸ್ಥಿತಿ ಎತ್ತ ಹೋಗುತ್ತಿದೆ. ಕಾಂಗ್ರೆಸ್ನ ಸೈಯದ್ ನಾಸೀರ್ ಹುಸೇನ್ ರಾಜ್ಯಸಭೆಗೆ ಆಯ್ಕೆಯಾದ ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ನಾಸೀರ್ ಹುಸೇನ್ ಪಕ್ಕದಲ್ಲೇ ಇರುವಾಗಲೇ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ. ‘ಸ್ವಯಂ’ ಸಂವಿಧಾನ ತಜ್ಞ ಎಂದು ಕರೆದುಕೊಳ್ಳುವ ಮಾನ್ಯ ಮುಖ್ಯಮಂತ್ರಿಗಳೇ ಯಾವಾಗ ಇಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೀರಾ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಸಂವಿಧಾನ ರಕ್ಷಿಸುವ ವಿಧಾನಸೌಧದ ಎದುರೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಖಂಡನೀಯ: ತೇಜಸ್ವಿ ಸೂರ್ಯ
ಸಂವಿಧಾನ ರಕ್ಷಿಸುವ ವಿಧಾನಸೌಧದ ಎದುರೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಖಂಡನೀಯ: ತೇಜಸ್ವಿ ಸೂರ್ಯ
Date: