ಬೆಂಗಳೂರು: ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಕೋವಿಡ್ ಸೋಂಕಿನ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿರುವ ಬೆನ್ನಲ್ಲೇ ನಿಯಂತ್ರಣಕ್ಕಾಗಿ ಹೊಸ ಕ್ರಮಗಳನ್ನು ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದೆ. ಇಂದು ರಾಜ್ಯದಲ್ಲಿ 525 ಮಂದಿ ಸೋಂಕಿತರಾಗಿದ್ದಾರೆ. ಒಟ್ಟು 3177 ಸಕ್ರಿಯ ಪ್ರಕರಣಗಳಿವೆ
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ. ರಂದೀಪ್, ಕೋವಿಡ್ ನಿಯಂತ್ರಣಕ್ಕಾಗಿ ಈ ಕೆಳಗಿನ ಮಾರ್ಗಸೂಚಿ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದ್ದಾರೆ.
ಹೊಸ ಮಾರ್ಗಸೂಚಿ ಕ್ರಮಗಳು ಹೀಗಿವೆ:
* ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ.
* ಮಾಸ್ಕ್ ಧರಿಸದೇ ಇದ್ದರೇ ದಂಡ ವಿಧಿಸಲು ಮಾರ್ಷಲ್, ಪೊಲೀಸ್ ಸಿಬ್ಬಂದಿಗಳಿಗೆ ಸೂಚನೆ.
* ಮಾಲ್, ಕಫೆಟೀರಿಯಾ, ಹೋಟೆಲ್, ಶೈಕ್ಷಣಿಕ ಸಂಸ್ಥೆಗಳು, ರೆಸ್ಟೋರೆಂಟ್, ಪಬ್, ಕಚೇರಿಗಳು, ಕಾರ್ಖಾನೆಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಧರಿಸಿ ಬರುವವರಿಗೆ ಮಾತ್ರವೇ ಅನುಮತಿ.
* ಐಎಲ್‌ಐ ಮತ್ತು ಸಾರಿ ಲಕ್ಷಣಗಳನ್ನು ಹೊಂದಿರುವವರು, ಹೈರಿಸ್ಕ್ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರೋರು ಆದ್ಯತೆ ಮೇರೆಗೆ ಪರೀಕ್ಷೆ ಒಳಪಡಲು ಸೂಚನೆ
* ಸ್ವಂತ ವಾಹನಗಳು ಹಾಗು ಸಾರ್ವಜನಿಕ ಸಾರಿಗೆಗಳಲ್ಲಿ (ಬಸ್ ಮತ್ತು ರೈಲು) ಪ್ರಯಾಣಿಸುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ.
* ಅರ್ಹ ಜನರೆಲ್ಲರೂ ಪ್ರಿಕಾಷನರಿ ಡೋಸ್ ಸೇರಿದಂತೆ, ಕೋವಿಡ್ ಲಸಿಕೆ ಪಡೆಯಲು ಸೂಚನೆ.
ಮೇಲ್ಕಂಡ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.