ಬೆಂಗಳೂರು, ಮೇ 21: ನೈಋತ್ಯ ಮುಂಗಾರು ರಾಜ್ಯಕ್ಕೆ ಈ ಬಾರಿ ತಡವಾಗಿ ಪ್ರವೇಶ ಮಾಡಲಿದ್ದು, ಜೂನ್ 2 ನೇ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಾರುತಗಳು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾಡಿಕೆಯಂತೆ ಜೂನ್ 1 ಅಥವಾ 2 ರಂದು ನೈಋತ್ಯ ಮಾರುತಗಳು ಕೇರಳಕ್ಕೆ ಆಗಮಿಸಲಿದ್ದು, 3-4 ದಿನಗಳ ಬಳಿಕ ರಾಜ್ಯ ಪ್ರವೇಶಿಸಬೇಕಿತ್ತು. ಆದರೆ ಮುಂಗಾರು ಪೂರ್ವದಲ್ಲಿ ಉಂಟಾಗಿದ್ದ ತೇವಾಂಶದ ಕೊರತೆ, ಗಾಳಿಯ ವೇಗ ಇಲ್ಲದಿರುವುದು ಹಾಗೂ ಮೋಕಾ ಚಂಡಮಾರುತದ ಪರಿಣಾಮ ಮುಂಗಾರು ತಡವಾಗಿ ರಾಜ್ಯಕ್ಕೆ ಪ್ರವೇಶಿಸಲಿದೆ.
ಅಂಡಮಾನ್ ನಲ್ಲಿ ಸದ್ಯದಲ್ಲೇ ಮಾರುತಗಳು ರೂಪುಗೊಳ್ಳಲು ಪೂರಕ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.