ಉಡುಪಿ, ಫೆ. 1: ಕೇಂದ್ರ ಸರ್ಕಾರದ ಈ ಸಾಲಿನ ಬಜೆಟ್ ಭಾರತದ ಮಧ್ಯಮವರ್ಗದವರ ಪಾಲಿಗೆ ನೆಮ್ಮದಿಯ ನಿಟ್ಟುಸಿರು ಮೂಡಿಸಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ಆತ್ಮನಿರ್ಭರ ಭಾರತವು ಮೇಕ್ ಇನ್ ಇಂಡಿಯಾ ಜೊತೆ ಸಾಗಲು ಈ ಬಜೆಟ್ ಪೂರಕವಾಗಿದೆ.
ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂಪಾಯಿ 5 ಸಾವಿರ ಕೋಟಿ ಒದಗಿಸಿರುವುದು ಮಧ್ಯ ಕರ್ನಾಟಕದ ಜನತೆಗೆ ದೊಡ್ಡ ಕೊಡುಗೆಯಾಗಿದೆ. ಮತ್ಸ್ಯ ಸಂಪದ ಯೋಜನೆಗೆ ರೂ. 6000 ಕೋಟಿಯನ್ನು ಒದಗಿಸಿರುವುದು ಭಾರತೀಯ ಮತ್ಸ್ಯೋದ್ಯಮದ ಬೆಳವಣಿಗೆಗೆ ಅತ್ಯಂತ ಪೂರಕವಾಗಿದ್ದು ಮೀನುಗಾರರ ಬದುಕನ್ನು ಮತ್ತಷ್ಟು ಹಸನುಗೊಳಿಸಲಿದೆ.
ರಾಷ್ಟ್ರೀಯ ಹಸಿರು ಇಂಧನಕ್ಕೆ ರೂ. 19700 ಕೋಟಿ ನೀಡಿರುವುದು ಹಾಗೂ 2030ರ ವೇಳೆಗೆ 5 ಎಂ.ಎಂ.ಟಿ ಹಸಿರು ಹೈಡ್ರೋಜನ್ ಉತ್ಪಾದನೆಯ ಗುರಿಯನ್ನು ನಿಗದಿಪಡಿಸಿರುವುದು, ಹಸಿರು ಇಂಧನದಲ್ಲಿ ಭಾರತ ಸ್ವಾವಲಂಬನೆಯತ್ತ ಸಾಗಲು ಪೂರಕವಾಗಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.